ಪುತ್ತೂರು : ಅಭಿನವ ಕೇಸರಿ ಮಾಡಾವು ಇದರ ವತಿಯಿಂದ ಅಯ್ಯಪ್ಪ ಭಜನಾ ಮಂದಿರ ಮಾಡಾವು ಇದರ ಸಹಯೋಗದಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯ ಉದ್ಘಾಟನೆ ಅಭಿನವ ಕೇಸರಿ ಯಕ್ಷ ಕಲಾ ಕೇಂದ್ರದಲ್ಲಿ ನಡೆಯಿತು.
ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಕೆದಂಬಾಡಿ-ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಕೆಯ್ಯೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ,ಸದಸ್ಯೆ ಮೀನಾಕ್ಷಿ ವಿ.ರೈ, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ,ಡಾ.ರಾಮಚಂದ್ರ ಭಟ್ ಸಾರಡ್ಕ,ಕೆಯ್ಯೂರು ಹಾ.ಉ.ಸ.ಸಂಘದ ಕಾರ್ಯದರ್ಶಿ ಭಾಸ್ಕರ ರೈ ಬೊಳಿಕಲ ಮಠ,ಚಂದ್ರಹಾಸ ರೈ ಬೊಳಿಕಲ ಮಠ,ಅಭಿನವ ಕೇಸರಿಯ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರೈ ಮಠ,ಉದ್ಯಮಿ ಸುಬ್ರಾಯ ಗೌಡ ಪಾಲ್ತಾಡಿ, ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ವಸಂತ ಪೂಜಾರಿ,ಯಕ್ಷಗಾನ ಕಲಾವಿದ ಕಡಬ ದಿನೇಶ್ ರೈ,ಯಕ್ಷಗಾನ ಗುರು ವಾಸುದೇವ ರೈ ಬೆಳ್ಳಾರೆ, ಕೆಯ್ಯೂರು ಗ್ರಾ.ಪಂ.ಸದಸ್ಯ ಕಂಪ ತಾರಾನಾಥ,ಅಭಿನವ ಕೇಸರಿ ಮಾಡಾವು ಇದರ ಅಧ್ಯಕ್ಷ ಶಶಿಧರ ಆಚಾರ್ಯ ಉಪಸ್ಥಿತರಿದ್ದರು.
ಪ್ರಜ್ವಲ್ ರೈ ಚೆನ್ನಾವರ ಸ್ವಾಗತಿಸಿದರು. ಆಕರ್ಷ ರೈ ವಂದಿಸಿದರು. ಅರ್ಚನಾ ರೈ ಕಾರ್ಯಕ್ರಮ ನಿರೂಪಿಸಿದರು.