ಪುತ್ತೂರು: ನಾಥ ಪಂಥಿಯ ಜೋಗಿ ಸಮಾಜ ಸುಧಾರಕ ಸಂಘ ಪುತ್ತೂರು ಇದರ ವತಿಯಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಮಾ.30ರಂದು ಪುರುಷಕರಟ್ಟೆಯಲ್ಲಿರುವ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಹರಿಕೃಷ್ಣ ಭಟ್ ಮಣಿಯರವರ ನೇತೃತ್ವದಲ್ಲಿ ನಡೆಯಲಿರುವ ಸತ್ಯನಾರಾಯಣ ಪೂಜೆಯಲ್ಲಿ ಬೆಳಿಗ್ಗೆ ಕಲಶ ಪ್ರತಿಷ್ಠೆ, ಪೂಜಾರಂಭ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯ ಬಳಿಕ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.