ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಶಿರಾಡಿ ದೈವಸ್ಥಾನದಲ್ಲಿ ದೊಂಪದ ಬಲಿ ನೇಮೋತ್ಸವ ಮಾ.26-27ರಂದು ನಡೆಯಿತು.
ಮಾ.26ರಂದು ಚೆನ್ನಾವರಗಡಿಗುತ್ತು ಚಾವಡಿಯಿಂದ ಗ್ರಾಮ ದೈವ ಅಬ್ಬೆಜಲಾಯ ದೈವದ ಭಂಡಾರ ತೆಗೆದು ಪಟ್ಟೆ ದೈವಸ್ಥಾನಕ್ಕೆ ತರಲಾಯಿತು. ಬಳಿಕ ಶಿರಾಡಿ ದೈವಸ್ಥಾನದಲ್ಲಿ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು.
ಬಳಿಕ ಗ್ರಾಮ ದೈವ ಅಬ್ಬೆಜಲಾಯ ,ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ ,ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಉಳ್ಳಾಕುಲು ಸೇವಾ ಸಮಿತಿ ಹಾಗೂ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.