ಪುಣಚದಿಂದ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಣೆ

0

ಪುಣಚ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ.27ರಿಂದ ಎ.7ರವರೆಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮದ ಅಂಗವಾಗಿ ಪುಣಚದಿಂದ ಹಸಿರುವಾಣಿ ಹೊರಕಾಣಿಕೆ ಸಮರ್ಪಣಾ ಮೆರವಣಿಗೆ‌‌ ಮಾ.28ರಂದು ಹೊರಟಿತು.


ಪುಣಚ ಪರಿಯಾಲ್ತಡ್ಕದಿಂದ ಹೊರಟು ದೇವಿನಗರ, ತೋರಣಕಟ್ಟೆ, ಮೂಡಂಬೈಲು, ಕೊಲ್ಲಪದವು ಕಡೆಗಳಿಂದ ಹೊರಕಾಣಿಕೆ ಹೊತ್ತ ವಾಹನಗಳು ಸಾರಡ್ಕದಲ್ಲಿ ವಿಟ್ಲ ಭಾಗದಿಂದ ಆಗಮಿಸಿದ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಮಧೂರು ಕ್ಷೇತ್ರಕ್ಕೆ ಸಾಗಿತು. ಬ್ರಹ್ಮಕಲಶೋತ್ಸವ ಪುಣಚ ಗ್ರಾಮ ಸಮಿತಿ ನೇತೃತ್ವದಲ್ಲಿ ನಡೆದ ಹಸಿರುವಾಣಿ‌‌ ಹೊರಕಾಣಿಕೆ ಕಾರ್ಯಕ್ರಮದಲ್ಲಿ ಪುಣಚ ಹಾಗೂ ಆಸುಪಾಸಿನ ಭಕ್ತಾದಿಗಳು, ಗ್ರಾಮಸ್ಥರು ಹೊರಕಾಣಿಕೆ ವಾಹನದೊಂದಿಗೆ ಪಾಲ್ಗೊಂಡರು.

LEAVE A REPLY

Please enter your comment!
Please enter your name here