ಪಾಣಾಜೆ ಗ್ರಾ.ಪಂ.ನ ವಾಟರ್‌ಮೆನ್ ರಾಮ ಪಾಟಾಳಿಗೆ ನಾಗರಿಕರಿಂದ ಗೌರವಾರ್ಪಣೆ

0

ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಂದಲ್ಕಾನ ಪರಿಸರದಲ್ಲಿ ವಾಟರ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೊಂದಲ್ಕಾನ ನಿವಾಸಿ ರಾಮ ಪಾಟಾಳಿಯವರನ್ನು ಕೊಂದಲ್ಕಾನ-ಗುರಿಕ್ಕೇಲು ಪರಿಸರದ ನಾಗರಿಕರು ಗೌರವಿಸಿದರು.

ರಾಮ ಪಾಟಾಳಿಯವರು ಕಳೆದ ಸುಮಾರು ವರ್ಷಗಳಿಂದ ಕೊಂದಲ್ಕಾನ ಪರಿಸರದಲ್ಲಿ ಪಂಚಾಯತ್ ವತಿಯಿಂದ ವಾಟರ್‌ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದು ವೈಯುಕ್ತಿಕ ಕಾರಣದಿಂದ ವಾಟರ್ ಮೆನ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಕೊಂದಲ್ಕಾನ-ಗುರಿಕ್ಕೇಲು ಪರಿಸರದ ಪ್ರೇಮರಾಜ್ ಆರ್ಲಪದವು, ಸಂದೀಪ್ ವಾಣಿಯನ್ ಹಾಗೂ ಅಲ್ಲಿನ ನಾಗರಿಕರು ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here