ಪ್ರಗತಿ ಸ್ಟಡಿ ಸೆಂಟರ್‌- NTTಯ 5 ವಿದ್ಯಾರ್ಥಿನಿಯರು ಮೊಂಟೆಸರಿ ಶಿಕ್ಷಕಿಯರಾಗಿ ಆಯ್ಕೆ

0

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 2024-25ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿ ಪಡೆದ 5 ವಿದ್ಯಾರ್ಥಿನಿಯರು ಸೌದಿ ಅರೇಬಿಯಾ ಸೇರಿದಂತೆ ವಿವಿದೆಡೆ ನರ್ಸರಿ ಶಿಕ್ಷಕಿಯರಾಗಿ ಆಯ್ಕೆಯಾಗಿದ್ದಾರೆ.

ಕಬಕ ನಿವಾಸಿ ಅಬ್ದುಲ್ ಆಸಿಫ್ ಅವರ ಪತ್ನಿ ರಹೀಮತ್ ನಿಶಾ ವಿಟ್ಲ ಮೇಗಿನಪೇಟೆಯ ಹೋರಿಝೋನ್ ಆಂಗ್ಲ ಮಾದ್ಯಮ ಪಬ್ಲಿಕ್ ಶಾಲೆಯ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ನೆಲ್ಯಾಡಿ ನಿವಾಸಿ ಪೈಸಲ್ ಅವರ ಪತ್ನಿ ಫೈಝಾ ಎಫ್ ನೆಲ್ಯಾಡಿಯ ಅಲ್ ಬದ್ರಿಯಾ ಆಂಗ್ಲ ಮಾದ್ಯಮ ಶಾಲೆಗೆ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಉಪ್ಪಿನಂಗಡಿ ನಿವಾಸಿ ಅಬ್ದುಲ್ ಮಜೀದ್ ಮತ್ತು ಸಾಜಿದ ದಂಪತಿಗಳ ಪುತ್ರಿಯಾದ ಶಾಬಿರ ಮೂಡಡ್ಕ ಅಲ್ ಮುನವ್ವರ ಎಜ್ಯುಕೇಷನ್ ಸೆಂಟರ್ ನ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ದಾಸಕೋಡಿ ನಿವಾಸಿ ಇಬ್ರಾಹಿಂ ಇವರ ಪುತ್ರಿ ಫಾತಿಮತ್ ಆಫಿಯ ಸೌದಿ ಅರೇಬಿಯಾದ ಶಾಲೆಯ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತಾರೆ. ಶೇಖಮಲೆ ನಿವಾಸಿ ಜಾಕಿರ್ ಹುಸೇನ್ ಮತ್ತು ಕುಬ್ರಾ ದಂಪತಿಗಳ ಪುತ್ರಿ ಝುಲ್ಫಾ ನರ್ಸರಿ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಶಿಕ್ಷಕಿಯರನ್ನು ಅಭಿನಂದಿಸಿರುವ ಸಂಸ್ಥೆಯ ಪ್ರಾಂಶುಪಾಲೆ ಕೆ. ಹೇಮಲತಾ ಗೋಕುಲ್‌ನಾಥ್ ಹಾಗೂ ಸಂಚಾಲಕ ಗೋಕುಲ್‌ನಾಥ್ ಪಿ.ವಿ. 2025-26ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊಂಡಿರುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here