ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ ಜಿ.ಎಲ್. ಯುಗಾದಿ ಆಫರ್ ಮಾ.29ರಂದು ಆರಂಭಗೊಂಡಿದ್ದು ಮಾ.31ರವರೆಗೆ ನಡೆಯಲಿದೆ.
ಸಮೃದ್ಧಿಯ ಸಂಕೇತವಾದ ಯುಗಾದಿ ಹಬ್ಬದ ಪ್ರಯಕ್ತ ಜಿ.ಎಲ್.ಜ್ಯುವೆಲ್ಲರ‍್ಸ್ ಸಂಸ್ಥೆಯು ತಮ್ಮ ನೆಚ್ಚಿನ ಗ್ರಾಹಕರಿಗಾಗಿ ಜಿ.ಎಲ್. ಯುಗಾದಿ ಆಫರ್ ಮೂಲಕ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ಹಾಗೂ ಪ್ರತಿ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡುಗೊರೆಗಳನ್ನು ಪಡೆದುಕೊಳ್ಳುವ ಸುವರ್ಣಾವಕಾಶ ಲಭ್ಯವಿದೆ.
ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಆಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ. ಪುರಾತನ ಆಭರಣಗಳ ವಿಭಾಗ “ಪ್ರಾಚಿ”ಯಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಆಂಟಿಕ್ ಚಿನ್ನಾಭರಣಗಳ ವಿವಿಧ ವಿನ್ಯಾಸಗಳು ಲಭ್ಯವಿದೆ. “ಗ್ಲೋ” ವಜ್ರಾಭರಣ ವಿಭಾಗದಲ್ಲಿ ಸುಮಾರು 2,000ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಪ್ರಜ್ವಲಿಸುವ ಅದ್ಭುತ ವಜ್ರಾಭರಣಗಳ ಸಂಗ್ರಹವಿದೆ. “ಪಾರ್ಥ” ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಪುರುಷರ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಅಲ್ಲದೇ ಇನ್ನು ಹಲವು ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ದವಾಗಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಮೂರು ದಿನಗಳ ಆಫರ್,ಜಿ.ಎಲ್.ಎಲ್ಲಾ ಮಳಿಗೆಗಳಲ್ಲಿ ಲಭ್ಯ
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಜಿ.ಎಲ್. ಯುಗಾದಿ ಆಫರ್ ಎಲ್ಲ ಮಳಿಗೆಗಳಲ್ಲಿ ಲಭ್ಯವಿದ್ದು ಮಾ.31ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ವಿಶೇಷತೆಗಳು
ಶೇ.100 ಬಿಎಎಸ್ ಹಾಲ್ ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ನ್ಯಾಯೋಚಿತ ತಯಾರಿಕಾ ವೆಚ್ಚ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಸಿಬ್ಬಂದಿಗಳ ನಗುಮೊಗದ ಸೇವೆ, ಖರೀದಿಯ ಬಳಿಕವೂ ವಸ್ತುಗಳ ಮೇಲೆ ಉತ್ತಮ ಸೇವೆ ಹಾಗೂ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷಿಸಲು ಸ್ಪೆಕ್ಟ್ರಾಮೀಟರ್ ಸಹ ಲಭ್ಯವಿದೆ.