ಪುತ್ತೂರು: ಮುಕ್ರಂಪಾಡಿಯ ನಂದಿವನದಲ್ಲಿ ನೂತನವಾಗಿ ನಿರ್ಮಾಣಗೊಂಡ “ಕೇಸರಿ ವನ”ದಲ್ಲಿ ಗಿಡ ನೆಟ್ಟು ಯುಗಾದಿ ಸಂಭ್ರಮ ಆಚರಿಸಲಾಯಿತು. ಪುತ್ತೂರಿನ ಹಿರಿಯ ವಕೀಲರಾದ ಬೆಟ್ಟ ಈಶ್ವರ್ ಭಟ್ ಮತ್ತು ಪದ್ಮಿನಿ ದಂಪತಿ ಹಾಗೂ ರಾಘವೇಂದ್ರ ಮಯ್ಯ ಗಿಡ ನೆಟ್ಟು ಚಾಲನೆ ನೀಡಿದರು. ಈಶ್ವರಮಂಗಲ ನಿಸರ್ಗ ನರ್ಸರಿಯ ಮಾಲಕ ಶಿವ ಎಸ್. ಪೂಜಾರಿ, ಉಡುಪಿ ಬ್ರಹ್ಮಾವರದ ವರ್ಕಾಡಿ ಪೇತ್ರಿಯ ಅನ್ನಪೂರ್ಣ ನರ್ಸರಿಯ ಪೃಥ್ವಿಶ್ ಕೆ., ಇಂಜಿನಿಯರ್ ನಿತಿನ್, ಸಂಜೀವ ಗೌಡ ಚಾಕೊಟೆ ಹಾಗೂ ಇತರರು ಉಪಸ್ಧಿತರಿದ್ದರು.

ಪ್ರಕೃತಿ ಮಾತೆಯ ಮಡಿಲಿನಲ್ಲಿ ತೆರೆದುಕೊಂಡು ಕಂಗೊಳಿಸಲಿದೆ “ಕೇಸರಿ ವನ”:
ಕೇಸರಿ ವನದಲ್ಲಿ ಸುಮಾರು 136 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನ ನೆಡಲಾಗುತ್ತಿದೆ. ಅಳಿವಿನ ಅಂಚಿನಲ್ಲಿರುವ ಹಣ್ಣಿನ ಗಿಡಗಳಿಗೆ ವಿಶೆಷ ಆದ್ಯತೆ ನೀಡಲಾಗುತ್ತಿದ್ದು ಒಂದು ಬದಿಯಲ್ಲಿ ಹಣ್ಣಿನ ಗಿಡ ಇನ್ನೊಂದು ಬದಿಯಲ್ಲಿ 250 ಅಡಿಕೆ ಗಿಡ ಕಂಗೊಳಿಸಲಿದೆ. ಕೇಸರಿ ವನದಲ್ಲಿ ಕಾರ್ಮಿಕರು ಕೇಸರಿ ಶರ್ಟ್ ತೊಟ್ಟು ಕೆಲಸ ನಿರ್ವಹಿಸಿದರು. ಉಡುಪಿಯ ಬ್ರಹ್ಮಾವರದ ವರ್ಕಾಡಿಯ ಪೇತ್ರಿಯಲ್ಲಿರುವ ಶ್ಯಾಮ್ ಪ್ರಸಾದ್ ಭಟ್ ಅವರ ಅನ್ನಪೂರ್ಣ ನರ್ಸರಿಯಿಂದ ಗಿಡಗಳನ್ನು ತರಲಾಗಿದೆ. ನಿಸರ್ಗ ನರ್ಸರಿಯ ಶಿವ ಎಸ್. ಪೂಜಾರಿರವರು ಕೇಸರಿ ವನದ ಸಂಪೂರ್ಣ ನಿರ್ವಹಣೆಯ ಜವಬ್ದಾರಿಯನ್ನು ವಹಿಸಲಿದ್ದಾರೆ.
ಕೇಸರಿವನದಲ್ಲಿ ದನಿಗಳ ಆಶಯದಂತೆ ಯುಗಾದಿಯ ದಿನವೇ ಗಿಡ ನೆಡುತ್ತಿದ್ದೇವೆ. ಒಟ್ಟು 136 ವಿವಿಧ ಜಾತಿಯ ಹಣ್ಣಿನ ಗಿಡಗಳ ಹಾಗೂ ಕೆಲ ಮದ್ದಿನ ಗಿಡಗಳನ್ನ ಹಾಕುತ್ತಿದ್ದೇವೆ. ನೆಲಕ್ಕೆ ಚೆನೈ ಬಫೋಲೋ ಗ್ರಾಸ್ ಹಾಕಿ ಸ್ಪೆಷಲ್ ಆಗಿ ಮಾಡೋ ಪ್ಲಾನ್ ಇದೆ.
ಶಿವ ಎಸ್. ಪೂಜಾರಿ
ನಿಸರ್ಗ ನರ್ಸರಿ ಈಶ್ವರಮಂಗಲ
ಕೇಸರಿವನದಲ್ಲಿ ದೇಸಿ ಹಾಗೂ ವಿಶೇಷ ಹಣ್ಣು ಮಿಶ್ರಿತವಾಗಿ ಗಿಡ ನೆಟ್ಟಿದ್ದೇವೆ. ಅಳಿವಿನಂಚಿನಲ್ಲಿ ಇರುವ ತುಂಬಾ ಹಳೇ ಕಾಲದ ಹಣ್ಣುಗಳ ಸಂರಕ್ಷಣೆಗಾಗಿ ಅವುಗಳನ್ನ ಇಲ್ಲಿ ಹಾಕುತ್ತಿದ್ದೇವೆ. ಇದರ ಜೊತೆಗೆ ಸೀಸನಲ್ ಹಣ್ಣುಗಳು ಇದೆ. ಈಗಾಗಲೇ ಹಣ್ಣು ಕೊಡುತ್ತಿರುವ ಗಿಡಗಳನ್ನ ಹಾಗೂ ಒಂದು-ಎರಡು ವರ್ಷದಲ್ಲಿ ಫಲ ಕೊಡುವ ಗಿಡಗಳನ್ನ ನೆಡುತ್ತಿದ್ದೇವೆ. ಇಲ್ಲಿ ಈಗಾಗಲೇ ನೆಟ್ಟಿರುವ ಗಿಡಗಳನ್ನ ನೋಡಿದಾಗ ಖುಷಿಯಾಗುತ್ತೆ. ಜಸ್ಟ್ ಗಿಡ ಕೊಟ್ಟಿದ್ದೇವೆ ಫಲ ಕೊಡುತ್ತಿದೆ ಅನ್ನೋದಲ್ಲ, ಬದಲಾಗಿ ಇಲ್ಲಿಗೆ ಬಂದಾಗ ಅವುಗಳ ಜೊತೆ ಮಾತನಾಡೋದು ಇವೆಲ್ಲವೂ ಖುಷಿ ಕೊಡುತ್ತದೆ. ಇಂತಹ ಗಾರ್ಡನ್ ಬೇಕು ಅಂತ ಕರೆ ಬರುತ್ತಿದೆ ನಿಮ್ಮಲ್ಲಿನ ಮಣ್ಣಿನ ಗುಣ, ವಾತಾವರಣ, ನೀರಿನ ವ್ಯವಸ್ಧೆ ಅಲ್ಲಿ ಯಾವ ಗಿಡ ನೆಟ್ಟರೆ ಉತ್ತಮ ಎಂದು ನೋಡಿಕೊಂಡು ಯಾವ ರೀತಿ ಗಾರ್ಡನ್ ಮಾಡಬಹುದೆಂದು ತೀರ್ಮಾನ ಮಾಡುತ್ತೇವೆ. ಎರಡು ವರ್ಷ ಕಳೆದರೆ ಈ ’ಕೇಸರಿ ವನ’ ಎಲ್ಲಾ ಗಿಡಗಳು ಒಂದೇ ಕಡೆ ಇರುವ, ಫಲ ಸಿಗುವ ಕಾಡಾಗಿ ಬದಲಾಗುತ್ತೆ.. ಅದನ್ನ ನೋಡೋದಿಕ್ಕೆ ನಾವು ಕಾತುರರಾಗಿದ್ದೇವೆ.
ಪೃಥ್ವಿಶ್ ಕೆ.
ಅನ್ನಪೂರ್ಣ ನರ್ಸರಿ ಉಡುಪಿ