ಕಡಬ: ಇಲ್ಲಿನ ಏರಂತಿಲ ಆದಿ ನಾಗಬ್ರಹ್ಮ ಮುಗೇರ್ಲು ದೈವಸ್ಥಾನಕ್ಕೆ ಕಡಬದ ಉದ್ಯಮಿ ಸಂತೋಷ್ ಸುವರ್ಣ ಕೋಡಿಬೈಲು ಅವರು ನೀರಿನ ಟ್ಯಾಂಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಕೊಡುಗೆಯಾಗಿ ನೀಡಿದ ನೀರಿನ ಟ್ಯಾಂಕಿಗೆ ಉದ್ಯಮಿ ಸುಂದರ ಗೌಡ ಮಂಡೆಕರ ಅವರು ಮಾ.31ರಂದು ಚಾಲನೆ ನೀಡಿದರು. ನೇಮೋತ್ಸವ ಸಮಿತಿಯ ಅಧ್ಯಕ್ಷ ಜನಾರ್ದನ ಮುಗೇರ ಮುಳಿಮಜಲು ಅವರು ಕೊಡುಗೆ ನೀಡಿದ ಸಂತೋಷ್ ಸುವರ್ಣ ಕೋಡಿಬೈಲು ಹಾಗೂ ಉದ್ಘಾಟಿಸಿದ ಸುಂದರ ಗೌಡ ಮಂಡೆಕರ ಅವರಿಗೆ ಕೃತಜ್ಞತೆ ಸಲ್ಲಿಸಿ, ದೈವದ ಪ್ರಸಾದ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಕಾರ್ಯದರ್ಶಿ ಕೇಶವ ಪಣೆಮಜಲು, ಖಜಾಂಜಿ ಗಿರೀಶ್ ಕೋಡಿಬೈಲು, ಸುರೇಶ್ ಮುಳಿಮಜಲು, ಅಣ್ಣು ಮುಗೇರ ಪನ್ಯ ಬಾಜಿನಡಿ, ನೇಮೋತ್ಸವ ಸಮಿತಿಯ ಗೌರವ ಸಲಹೆಗಾರ ಕೆ. ಪ್ರಸನ್ನ ಮುಗೇರ, ಕಿಟ್ಟು ಮುಗೇರ ಹಳೆಸ್ಟೇಷನ್, ದಯಾನಂದ ಏರಂತಿಲ, ಬಾಬು ಮುಗೇರ ತುಂಬೆತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.