ಉಪ್ಪಿನಂಗಡಿ: ಕರಾಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯು ಪ್ರಕಟಿಸಿದ್ದು, ಅಧ್ಯಕ್ಷರಾಗಿ ಪಿ.ಆರ್. ಅನಂತ ಕೃಷ್ಣ ಕುದ್ದಣ್ಣಾಯ ಪೆರೋಡಿ ಇವರು ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದೇವಾಲಯದ ಅರ್ಚಕರಾದ ಶಶಿಕಾಂತ್ ಕೆ. ರಾವ್, ಜಯವಿಕ್ರಮ ಕಲ್ಲಾಪು, ಪಂಜಿಕುಡೇಲು ದಯಾನಂದ, ಐ. ಕುಶಾಲಪ್ಪ ಗೌಡ ಇಜಿಮಾನ್, ಜಯಪ್ರಕಾಶ ಮೈರಾ, ಸೂರ ಪಡ್ಡಾಯಿಪೆಟ್ಟು, ತೇಜಸ್ವಿನಿ ಗರಡಿ, ನಂದಿನಿ ದೇವರಮಾರು ಇವರನ್ನು ನೇಮಕಗೊಳಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆಯು ಆದೇಶ ಹೊರಡಿಸಿದೆ.