ಶೇ 100 ಸಾಲ ಮರುಪಾವತಿಯಿಂದ ಸಂಘದ ಹಿರಿಮೆ ಹೆಚ್ಚಿಸಿದೆ- ಗಣೇಶ್ ಉದನಡ್ಕ
ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ 2024- 25ನೇ ಸಾಲಿನಲ್ಲಿ ಸಂಘದ ಸದಸ್ಯರು ಪಡೆದುಕೊಂಡ ಸಾಲ ಹಾಗೂ ಕಂತುಗಳನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದರಿಂದ ಶೇಕಡಾ 100 ಸಾಲ ವಸೂಲಾತಿ ಸಾಧನೆ ಮಾಡಿದ ಸಂಘವಾಗಿ ಹೊರಹೊಮ್ಮಿದೆ. ಶತಮಾನೋತ್ಸವವನ್ನು ಆಚರಿಸಿಕೊಂಡಿರುವ ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಕಳೆದ 10 ವರ್ಷಗಳಿಂದ ಪ್ರತಿಷ್ಠಿತ ಎಸ್.ಸಿ.ಡಿ.ಸಿ ಬ್ಯಾಂಕಿನಿಂದ ಪ್ರಶಸ್ತಿ ಪುರಸ್ಕೃತಗೊಂಡು, 10 ವರ್ಷಗಳಿಂದ ಅಡಿಟ್ ವರ್ಗಿಕರಣದಲ್ಲಿ ‘ಎ ‘ ತರಗತಿಯಲ್ಲಿ ಮುನ್ನಡೆಸಿದ್ದು, 12 ವರ್ಷಗಳಿಂದ ಲಾಭಗಳಿಸಿಕೊಂಡು 12 ವರ್ಷಗಳಿಂದ ಸದಸ್ಯರಿಗೆ ಡಿವಿಡೆಂಡ್ ವಿತರಿಸುತ್ತಿದೆ. ಜನವರಿ 2025 ರಂದು 3 ದಿನಗಳ ಕಾಲ ಅದ್ಧೂರಿಯಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿ ಇದೀಗ 100 ವರ್ಷದ ಸವಿನೆನಪಿಗೆ ಸದಸ್ಯರು 100 ಶೇಕಡಾ ಸಾಲ ಮರುಪಾವತಿಸುವ ಮೂಲಕ ಸಂಘದ ಸಾಧನೆ ಇನ್ನಷ್ಟು ಹೆಚ್ಚಿಸಿದೆ.
ಶೇ 100 ಸಾಲ ಮರುಪಾವತಿಯಿಂದ ಸಂಘದ ಹಿರಿಮೆ ಹೆಚ್ಚಿಸಿದೆ
ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿರುವ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೇಕಡಾ 100 ಸಾಲ ಮರುಪಾವತಿ ಮಾಡುವ ಮೂಲಕ ಸದಸ್ಯರು ಸಂಘದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ. ಸಂಘದ ಮೇಲಿನ ಅಭಿಮಾನದಿಂದ ಸಕಾಲದಲ್ಲಿ ಸಾಲ ಮರುಪಾವತಿಸಿದ ಸದಸ್ಯರಿಗೆ, ಗ್ರಾಹಕರಿಗೆ, ಠೇವಣಿದಾರರಿಗೆ, ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
ಗಣೇಶ್ ಉದನಡ್ಕ ಅಧ್ಯಕ್ಷರು, ಚಾರ್ವಾಕ ಪ್ರಾ. ಕೃ.ಪ. ಸ. ಸಂಘ ಕಾಣಿಯೂರು