ಉಪ್ಪಿನಂಗಡಿ: ಸುಮಾರು 65ರ ಹರೆಯದ ಅನ್ಯಕೋಮಿನ ವೃದ್ಧನೊಂದಿಗೆ ಮಧ್ಯ ವಯಸ್ಕ ಹಿಂದೂ ಮಹಿಳೆಯೋರ್ವಳು ನೇಜಿಕಾರು ಎಂಬಲ್ಲಿ ಗುಡ್ಡದಲ್ಲಿ ಪತ್ತೆಯಾಗಿದ್ದು, ಇದನ್ನು ಕಂಡ ಸ್ಥಳೀಯರು ಅವರನ್ನು ಹಿಡಿದು, ಎರಡೂ ಕಡೆಯವರನ್ನು ಕರೆದು ಬುದ್ಧಿವಾದ ಹೇಳಿ ಕಳುಹಿಸಿದ ಘಟನೆ ಎ.1ರಂದು ನಡೆದಿದೆ.
ಕರ್ವೇಲು ಬಳಿಯ 65ರ ಹರೆಯದ ವೃದ್ಧ ಹಾಗೂ ಮದುವೆಯಾಗಿ ಮಕ್ಕಳಿರುವ ಕರ್ವೇಲು ಬಳಿಯ ಮಹಿಳೆಯೊಂದಿಗೆ ಪತ್ತೆಯಾಗಿದ್ದ. ಇವರ ಅನೈತಿಕ ಚಟುವಟಿಕೆಯ ಸುಳಿವನ್ನಾಧರಿಸಿದ ಸ್ಥಳೀಯರಿಗೆ ಈ ಜೋಡಿ ಸಿಕ್ಕಿ ಬಿದ್ದಿತ್ತು. ಕೂಡಲೇ ಎರಡೂ ಕಡೆಯವರನ್ನು ಕರೆಸಿದ ಸ್ಥಳೀಯರು ಇವರಿಗೆ ಬುದ್ಧಿವಾದ ಹೇಳಿ ಪ್ರಕರಣವನ್ನು ಸುಖಾಂತ್ಯಗೊಳಿಸಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ.ವೃದ್ಧನಿಗೆ ಮದುವೆಯಾಗಿ ಏಳು ಮಂದಿ ಮಕ್ಕಳಿದ್ದಾರೆ ಎನ್ನಲಾಗಿದೆ.