ಉಪ್ಪಿನಂಗಡಿ: ಪತ್ನಿ ಮಕ್ಕಳಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದ ರೋಬರ್ಟ್ ಮಸ್ಕರೇನ್ಹಸ್ (63) ಎಂಬವರು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿನ ಮನೆಯಲ್ಲಿ ಮೃತ ಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಈ ಸಂಬಂಧ ಮೃತರ ಸಹೋದರ ವಲ್ಲಿ ಮಸ್ಕರೇನ್ಹಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಸಹೋದರ ರೋಬರ್ಟ್ ಮಸ್ಕರೇನ್ಹಸ್ ವಿವಾಹಿತರಾಗಿ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಹೊಂದಿದ್ದು, ಕೌಟುಂಬಿಕ ವಿರಸದಿಂದಾಗಿ ಕಳೆದ ಹದಿನೈದು ವರ್ಷಗಳಿಂದ ಪತ್ನಿ ಮಕ್ಕಳಿಂದ ದೂರವಾಗಿ ಒಂಟಿಯಾಗಿ ಮನೆಯಲ್ಲಿ ವಾಸವಾಗಿದ್ದವರು, ಮಾರ್ಚ್ 25 ರ ಬೆಳಗ್ಗೆ ಸಂಪರ್ಕಕ್ಕೆ ಸಿಕ್ಕಿದವರು, ಬಳಿಕ ಸಂಪರ್ಕಕ್ಕೂ , ಪೋನ್ ಕರೆಗೂ ಸಿಗದೇ ಇದ್ದು, ಮಾರ್ಚ್ 31 ರಂದು ಮನೆಗೆ ಬಂದು ಪರಿಶೀಲಿಸಿದಾಗ , ಮನೆಯ ಎದುರುಗಡೆಯ ಬಾಗಿಲು ತೆರೆದಿದ್ದು, ರೋಬರ್ಟ್ ಮಸ್ಕರೇನ್ಹಸ್ ರವರು ಮನೆಯ ಹಾಲ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.