ಉಪ್ಪಿನಂಗಡಿ ಪ್ರ.ದ. ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

0

ಉಪ್ಪಿನಂಗಡಿ: ಪ್ರವಾಹ, ಭೂಕುಸಿತಗಳಂತ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಅದಕ್ಕೆ ಸಿಲುಕಿಕೊಂಡವರನ್ನು ರಕ್ಷಿಸುವ, ಹೆಚ್ಚಿನ ಅನಾಹುತಗಳನ್ನು ತಡೆಯುವ ಬಗ್ಗೆ ಅರಿವು ಹೊಂದಿರುವುದು ಅತೀ ಅಗತ್ಯ ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕೃಷ್ಣ ಡಿ. ತಿಳಿಸಿದರು.


ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಆರನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ನೈಸರ್ಗಿಕ ವಿಕೋಪಗಳು ಮತ್ತು ಅವುಗಳ ನಿರ್ವಹಣೆ” ಎಂಬ ವಿಷಯದ ಕುರಿತು ಮಾತನಾಡಿದರು.


ಭೂವಿಜ್ಞಾನ, ಜಲವಿಜ್ಞಾನ ಮತ್ತು ಹವಾಮಾನಗಳ ಬಗ್ಗೆ ಅರಿವು ಪಡೆದು ಮತ್ತು ನೈಸರ್ಗಿಕ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಒಟ್ಟಾಗಿ ಕೆಲಸ ಮಾಡುವ ಮುಖಾಂತರ ಸಂಭವಿಸುವ ದುರಂತದ ಪ್ರಮಾಣವನ್ನು ಕಡಿಮೆಗೊಳಿಸಬಹುದೆಂದು ಹೇಳಿದರು.


ಕಾರ್ಯಕ್ರಮದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಕೇಶವ ಕುಮಾರ್ ಬಿ. ಉಪಸ್ಥಿತರಿದ್ದರು.
ಸ್ವಯಂ ಸೇವಕಿಯರಾದ ಸಂಗೀತಾ, ಪ್ರಿಯಲತಾ, ತ್ರಿಷಾ ಪ್ರಾರ್ಥಿಸಿದರು. ತ್ರಿಷಾ ಸ್ವಾಗತಿಸಿದರು, ಜೀವಿತ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ದೀಕ್ಷಾ ಎನ್.ಎಸ್. ವಂದಿಸಿದರು ಹಾಗೂ ಹರ್ಷಿತಾ ಕೆ. ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here