ಪುತ್ತೂರು: ಎ.9 ರಿಂದ 10ರ ತನಕ ನಡೆಯಲಿರುವ ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವಕ್ಕೆ ಎ.2ರಂದು ಬೆಳಿಗ್ಗೆ ಗೊನೆಮುಹೂರ್ತ ನೆರವೇರಿಸಲಾಯಿತು.
ಗೊನೆ ಮುಹೂರ್ತವನ್ನು ಬನ್ನೂರು ಗೋಳ್ತಿಲ ಈಶ್ವರ ಗೌಡ ಅವರ ತೋಟದಲ್ಲಿ ಅರ್ಚಕ ಗೋಪಾಲಕೃಷ್ಣ ಭಟ್ ಅವರು ನೆರವೇರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ, ದಯಾನಂದ ಜೈನಗುರಿ, ಚಂದ್ರಾಕ್ಷ ಬಿ.ಎನ್, ಈಶ್ವರ ಗೌಡ ಗೋಳ್ತಿಲ, ಹರೀಶ್ ಕುಲಾಲ್ ನೆಕ್ಕಿಲ, ಬಾಲಕೃಷ್ಣ ಗೋಳ್ತಿಲ, ದಿಲೀಪ್ ಕಜೆ, ಶೀನಪ್ಪ ಕುಲಾಲ್ ಬದಿಯಡ್ಕ, ಭರತ್ ಗೌಡ ಕುಂಟ್ಯಾನ, ಕುಲದಪ ಗೋಳ್ತಿಲ, ನಿಕಟಪೂರ್ವ ಅಧ್ಯಕ್ಷ ರಾಮಣ್ಣ ಗೌಡ ಹಲಂಗ, ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.