ಸುಳ್ಯ: ಜಾಲ್ಸೂರು (ಅಡ್ಕಾರು) ಪಯಸ್ವಿನಿ ನದಿ ಕಿನಾರೆಯಲ್ಲಿರುವ ಅಂತ್ಯ ವಿಶ್ರಾಂತಿ ಹೊಂದಿರುವ ಔಲಿಯಾಗಳ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ವಲಿಯುಲ್ಲಾಹಿ ದರ್ಗಾ ಶರೀಫ್ ಮಖಾಂ ಉರೂಸ್ ಸಮಾರಂಭವು ಎ.12ರಿಂದ 14ರ ವರೆಗೆ ಖುದುವ್ವತುಸ್ಸಾದಾತ್ ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಎ.12ರ ಶನಿವಾರದಂದು ಸಂಜೆ 4.30ಕ್ಕೆ ಉರೂಸ್ ಕಮಿಟಿ ಅಧ್ಯಕ್ಷರಾದ ಅಬ್ಬಾಸ್ ಹಾಝಿ ಕದಿಕಡ್ಕ ಇವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ಇವರಿಂದ ಉದ್ಘಾಟನೆ ನೆರವೇರಿದ ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಜೆಎಂ ಜಾಲ್ಸೂರು ಇದರ ಅಧ್ಯಕ್ಷ ಜಿ. ಪಿ ಅಬ್ದುಲ್ಲ ಕುಂಞಿ ವಹಿಸಲಿದ್ದಾರೆ. ದುಃಆ ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ಸುಳ್ಯ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಖಾರಿಹ್ ಮುಸ್ತಫಾ ಸಖಾಫಿ ತೆನ್ನಲ ಇವರು ಆಗಮಿಸಲಿದ್ದಾರೆ. ಶಾಹುಲ್ ಹಮೀದ್ ಸಖಾಫಿ ಸ್ವಾಗತ ಮಾಡಲಿದ್ದು, ವೇದಿಕೆಯಲ್ಲಿ ಹಬೀಬ್ ಹಿಮಮಿ ಸಹಿತ ಹಲವು ಗಣ್ಯರು ಉಪಸ್ಥಿತಲಿರುವರು.
ಎ.13ರ ಆದಿತ್ಯವಾರದಂದು ದ್ಸಿಕ್ರ್ ನೇರ್ಚೆ ನಡೆಯಲಿದ್ದು, ದುಃಆ ಸಯ್ಯದ್ ಜೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಎಣ್ಮೂರು ನೆರವೇರಿಸಲಿದ್ದಾರೆ. ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ರಶೀದ್ ಮದನಿ ಸಂಪ್ಯ ಇವರು ಸ್ವಾಗತಿಸಲಿದ್ದು, ಸಾದಿಕ್ ಪಾಲಿಳಿ ಕುಂಬ್ರ ಹಾಗೂ ಸಿ ಪಿ ರಝಾಕ್ ಇವರು ವೇದಿಕೆಯಲ್ಲಿ ಉಪಸ್ಥಿತಲಿರುವರು.
ಎ.14ರ ಸೋಮವಾರ ಸಮಾರೋಪ ಸಮಾರಂಭವು ಸಡೆಯಲಿದ್ದು, ಅಸರ್ ನಮಾಜಿನ ಬಳಿಕ ಖುದುವ್ವತುಸ್ಸಾದಾತ್ ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ಮೌಲುದ್ ಮಜ್ಲಿಸ್ ನಡೆಯಲಿದೆ. ರಾತ್ರಿ 8ರಿಂದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಾಸ್ ಹಾಜಿ ಕದಿಕಡ್ಕ ವಹಿಸಲಿದ್ದು, ದುಃಆ ಶೈಖುನಾ ಮಹ್ ಮೂದುಲ್ ಫೈಝಿ ವಾಲೆಮುಂಡೋವು ನೆರವೇರಿಸಲಿದ್ದಾರೆ. ಜುನೈದ್ ಹಿಮಮಿ ಸಖಾಫಿ ತುರ್ಕಳಿಕೆ ಸ್ವಾಗತದೊಂದಿಗೆ ಮುಖ್ಯ ಪ್ರಭಾಷಣ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮಾಡಲಿದ್ದಾರೆ. ಮುನೀರ್ ಸಅದಿ ಅಲ್ ಅರ್ಶದಿ ನೆಲ್ಲಿಕುನ್ನ್ ವೇದಿಕೆಯಲ್ಲಿರುವರು. ಎ.13ರಂದು ನೇರ್ಚೆ ಬಳಿಕ ತಬರ್ರುಖ್ ವಿತರಣೆ ಹಾಗೂ ಸಮಾರೋಪದ ದಿನ ಅನ್ನದಾನ ವಿತರಣೆ ನಡೆಯಲಿದೆ. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶವಿರಲಿದೆ ಎಂದು ಸಂಘಟಕರು ತಿಳಿದಿದ್ದಾರೆ.