ಪುತ್ತೂರು:ಪತ್ರಿಕಾ ಮಾಧ್ಯಮ ಸಂಸ್ಥೆಯ ವಾಹನಕ್ಕೆ ಟಾಟಾ ಯೋಧ ಗೂಡ್ಸ್ ವಾಹನ ಡಿಕ್ಕಿಯಾಗಿ ಪರಾರಿಯಾದ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ಎ.2ರ ರಾತ್ರಿ ನಡೆದಿದೆ.ಘಟನೆಯಲ್ಲಿ ಕ್ಯಾಮರಾಮ್ಯಾನ್-ವರದಿಗಾರರೋರ್ವರಿಗೆ ಗಾಯವಾಗಿದೆ.
ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಸರಣ ವಿಭಾಗದ ಪ್ರಜ್ವಲ್ ಎಂಬವರು ಬೆಳ್ತಂಗಡಿ ಸುದ್ದಿ ಕಚೇರಿಗೆ ಹೋಗಲೆಂದು ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ ವ್ಯಾಗನರ್ ಕಾರನ್ನು (ಕೆಎ 70 ಎಂ:0347) ಓವರ್ ಟೇಕ್ ಮಾಡಿ ಮುಂದೆ ಸಾಗಿದ ಟಾಟಾ ಯೋಧ ಗೂಡ್ಸ್ ವಾಹನ (ಕೆಎ 21 ಎ 3655) ವ್ಯಾಗನರ್ ಕಾರಿನ ಎಡ ಭಾಗಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ವ್ಯಾಗನರ್ ಕಾರಿಗೆ ಹಾನಿಯಾಗಿದೆ.ಕಾರಿನ ಒಳಗಿದ್ದ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಮತ್ತು ಕ್ಯಾಮರಾಮ್ಯಾನ್ ವನೀಶ್ ಎಂಬವರ ಕೈಗೆ ಗಾಯವಾಗಿದೆ.ಗಾಯಾಳು ವನೀಶ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಪುತ್ತೂರು ಸಂಚಾರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.ಅಪಘಾತವೆಸಗಿದ ವಾಹನವನ್ನು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಪಘಾತವಾಗಿರುವುದು ಗೊತ್ತಾದರೂ ನಿಲ್ಲಿಸದೆ ಪರಾರಿ:
ವ್ಯಾಗನರ್ ಕಾರಿಗೆ ಡಿಕ್ಕಿಯಾಗಿರುವ ಟಾಟಾ ಯೋಧ ವಾಹನವನ್ನು ಹಿಂಬಾಲಿಸಿದರೂ ಚಾಲಕ ನಿಲ್ಲಿಸದೆ ವೇಗವಾಗಿ ಮುಖ್ಯರಸ್ತೆಯ ಒಳಮಾರ್ಗದಲ್ಲಿ ಪರಾರಿಯಾಗಿದ್ದಾರೆ.ಈ ಕುರಿತ ವಿಡಿಯೋ ಕೂಡಾ ಲಭ್ಯವಾಗಿದೆ.