ದೇವಳದ ಗುಮಾಸ್ತನಿಗೆ ಹಲ್ಲೆ ಪ್ರಕರಣ : ಆರೋಪಿ ದೋಷಮುಕ್ತ

0

ಪುತ್ತೂರು:6 ವರ್ಷಗಳ ಹಿಂದೆ ಕಡಬ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಚೇರಿ ಗುಮಾಸ್ತ ಹುದ್ದೆಯಲ್ಲಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.


ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಚೇರಿ ಗುಮಾಸ್ತ ಹುದ್ದೆಯಲ್ಲಿದ್ದ ಕಿನ್ನಿಗೋಳಿ ನಿವಾಸಿ ಕೆ.ಜಯಂತ ಕುಮಾರ ಎಂಬವರು ಹಲ್ಲೆಗೊಳಗಾದವರಾಗಿದ್ದು,‘2019ರ ಮೇ 11ರಂದು ನನಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ ಅವರು ಕೆಲಸದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದು,ಸೇವಾ ಅಮಾನತುಗೊಳಿಸಿರುವ ಬಗ್ಗೆ ಸೂಚನಾ ಪತ್ರವನ್ನು ಜಾರಿ ಮಾಡಿದ್ದರು.ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ರೈ ಮತ್ತು ನಿರ್ವಹಣಾ ಸಮಿತಿ ಸದಸ್ಯ ಉಮೇಶ್ ದೇವಾಡಿಗ ಅವರು ಕೆಲಸಕ್ಕೆ ಅಡ್ಡಿ ಮಾಡಿ, ಸುಲಿಗೆ ಮಾಡುವ ಸಲುವಾಗಿ ಅವ್ಯವಹಾರದ ಸುಳ್ಳು ಸುದ್ದಿಯನ್ನು ಹಬ್ಬಿಸಿ, ಕಂಪ್ಯೂಟರ್ ತಂತ್ರಾಂಶವಿರುವ ರೂಮಿನ ಕೀಯನ್ನು ಬಲವಂತವಾಗಿ ಪಡೆದು ಜೀವ ಬೆದರಿಕೆಯೊಡ್ಡಿರುವುದಾಗಿ’ಆರೋಪಿಸಿ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.

ನ್ಯಾಯಾಲಯದ ಸೂಚನೆಯಂತೆ ಕಡಬ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ನ್ಯಾಯಾಲಯದ ವಿಚಾರಣ ಹಂತದಲ್ಲಿ,ಕಮಲಾಕ್ಷ ರೈ ಅವರು ನಿಧನರಾಗಿದ್ದರು.ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ನ್ಯಾಯಾಲಯ ಆರೋಪಿ ಆಲಂಗಾರು ಗ್ರಾಮದ ಉಮೇಶ್ ದೇವಾಡಿಗ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮಮತಾ ಶೆಟ್ಟಿ ವಾದಿಸಿದರು.

LEAVE A REPLY

Please enter your comment!
Please enter your name here