ಕ್ಯಾನ್ಸರ್ ಪೀಡಿತ ಪ್ರಾಧ್ಯಾಪಕನ ‘ದಿ ಲಾಸ್ಟ್ ಲೆಕ್ಚರ್’

0

ಅನೇಕರು ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಕುಗ್ಗಿ ಹೋಗುವುದೇ ಹೆಚ್ಚು, ಪ್ರಸ್ತುತ ಕಾಲಘಟ್ಟದಲ್ಲಿ ಕುಗ್ಗುವಿಕೆಯಿಂದ ಬಳಲುವುದು ಮಾಮೂಲಿ ಎಂಬಂತಾಗಿದೆ. ಮನಸ್ಸಿನ ವೇದನೆಯನ್ನು ಕಡಿಮೆ ಮಾಡಲು ಚಟದ ಮೊರೆ ಹೋಗುತ್ತಿರುವವರ ಸಂಖ್ಯೆಯು ಯಥೇಚ್ಚವಾಗಿ ಹೆಚ್ಚುತ್ತಿದೆ. ಕಾರಣ ನಮಗೆ ಎದುರಿಸುವ ಮಾರ್ಗಗಳೇ ತೋಚುತ್ತಿಲ್ಲ. ಅಂತವರಿಗೊಂದು ಮಾರ್ಗದರ್ಶಿಯಾಗಿ ನಿಲ್ಲಬಹುದಾದ, ಕುಗ್ಗಿದವನನ್ನು, ಮಾರ್ಗವಿಲ್ಲದೆ ಅಲೆಮಾರಿಗೂ ಒಂದು ದಾರಿ ದೀಪವಾಗಬಲ್ಲ ಸುಲಭದ ದಾರಿ ಪುಸ್ತಕಗಳ ಲೋಕ.

ನನಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಬಂದಿದೆ ಎಂದು ತಿಳಿದ ಮೇಲೂ ಹೇಗೂ ಸಾಯುವವನೇ ಆದರೆ ಇನ್ನೊಬ್ಬರಿಗೆ ಭರವಸೆಯ ದೀಪವಾಗಿ ಪ್ರಜ್ವಲಿಸಲೆಂದು ತೀರ್ಮಾಸಿ ತಾನು ಇರುವ ವೃತ್ತಿಯನ್ನೇ ಅದಕ್ಕೆ ವೇದಿಕೆಯನ್ನಾಗಿಸಿ ಅನೇಕ ಜೀವಗಳಿಗೆ ಮಾತುಗಳ ಮೂಲಕವೂ ಇಂದಿಗೂ ಯೂಟ್ಯೂಬ್ ಮೂಲಕ ಸಿಗುತ್ತಾರೆ. ಅವರೇ ಮಾತನಾಡುತ್ತಿದ್ದಾರೆ ಎಂದು ಭಾಷವಾಗುವ ಅವರದೇ ಬರಹದ ಪುಸ್ತಕವೂ ಸಿಗುತ್ತದೆ. ಅದೂ ಇಂಗ್ಲಿಷಿನಲ್ಲಿಯೂ ಇದೆ ಕನ್ನಡದಲ್ಲೂ ಇದೆ. ಅಷ್ಟಕ್ಕೂ ಯಾವ ಪುಸ್ತಕ ಗೊತ್ತಾ…? ಅದೇ ‘ದಿ ಲಾಸ್ಟ್ ಲೆಕ್ಚರ್…

ʼದಿ ಲಾಸ್ಟ್ ಲೆಕ್ಚರ್’ 2008 ರಲ್ಲಿ ಮೂಡಿಬಂದ ಪುಸ್ತಕವಾಗಿದ್ದು, ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿರುವ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ, ಮಾನವ-ಕಂಪ್ಯೂಟರ್ ಸಂವಹನ ಮತ್ತು ವಿನ್ಯಾಸದ ಪ್ರಾಧ್ಯಾಪಕರಾದ ರಾಂಡಿ ಪೌಶ್ ಮತ್ತು ಜೆಫ್ರಿ ಜಾಸ್ಲೋ ಅವರಿಂದ ಮೂಡಿ ಬಂದಿರುವ ಪ್ರೇರಣಾದಾಯಕವಾದ ಪುಸ್ತಕ.

ಪುಸ್ತಕದ ತುಂಬೆಲ್ಲಾ ರಾಂಡಿ ಪೌಶ್ ಅವರ ಮಾತುಗಳೆ ಪ್ರತಿಧ್ವನಿಸುತ್ತವೆ. ಅಷ್ಟಕ್ಕೂ ಪ್ರತಿಧ್ವನಿಸಲು ಕಾರಣವೂ ಅವರೇ. ಅವರದ್ದೇ ಜೀವನ. ನಾಳೆ ನನ್ನ ಸಾವು ಖಚಿತ ಎಂದಾಗ ಒಬ್ಬ ಉಪನ್ಯಾಸಕ ಏನು ಮಾಡಬಹುದು ಎಂದಾಗ ಇವರಿಗೆ ತೋಚಿದ್ದು ಕೊನೆಯ ಮಾತುಗಳನ್ನು ಆಡಬೇಕು ಅದೂ ಇನ್ನೊಬ್ಬರಿಗೆ ಪ್ರೇರಣದಾಯಿಯಾಗಿರಬೇಕು ಎಂದವರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದವರಿಗೂ ಸ್ವತಃ ಪೌಶ್ ಅವರೇ ಸ್ಫೂರ್ತಿಯಾಗುವ ವೇದಿಕೆಯಲ್ಲಿ ವಿದಾಯ ಹೇಳುವುದಕ್ಕೆ ಒಂದು ವೇದಿಕೆಯನ್ನು ಮಾಡುತ್ತಾರೆ. ಅಂತಹ ವೇದಿಕೆಯ ಮಾತುಗಳೆ ‘ದಿ ಲಾಸ್ಟ್ ಲೆಕ್ಚರ್’ ಪುಸ್ತಕದಲ್ಲಿ ಮೂಡಿಬಂದ ಅಕ್ಷರ ಮಾಲೆ.

ಹಾಸ್ಯಮಯವನ್ನೊಳಗೊಂಡು ಎಂತಹ ವರ್ಗದ ಓದುಗರನ್ನು ಆಕರ್ಷಿಸುವ ಈ ಪುಸ್ತಕ ಮೂಲ ಇಂಗ್ಲಿಷ್ ನಲ್ಲಿ ಇದ್ದರೆ ಕನ್ನಡಿಗರಿಗೂ ಮೋಸವಾಗದಂತೆ ಕನ್ನಡದಲ್ಲಿಯೂ ಪ್ರಕಟಗೊಂಡು ಈಗಾಗಲೇ ಅನೇಕರಿಗೆ ಜೀವಾಮೃತವಾಗಿಯೂ ಕೈಪಿಡಿಯಾಗಿಯೂ ನಿಂತಿದೆ. ಪುಸ್ತಕದಲ್ಲಿ ಪೌಶ್ ತಮ್ಮ ಹಿಂದಿನ ಅನುಭವಗಳ ಮೂಲಕ, ಅವರು ನಿಧನರಾದ ನಂತರ ಅವರಿಗೆ ಬೇಕಾಗಬಹುದಾದ ಸಲಹೆಯನ್ನು ನೀಡಲು ಪ್ರಯತ್ನಿಸುತ್ತಾರೆ. ಅವರು ಬೆಳೆದ ನೆನಪುಗಳನ್ನು ಮತ್ತು ತನ್ನ ಬಾಲ್ಯದ ಕನಸುಗಳನ್ನು ಸಾಧಿಸುವಲ್ಲಿ ಪಾತ್ರ ವಹಿಸಿದ ಪ್ರಮುಖ ಜನರನ್ನು ವಿವರಿಸಿ ಓದುಗರಲ್ಲಿ ತನ್ನ ಸಂಪೂರ್ಣ ಜೀವನವನ್ನು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ನಿಮಗೂ ಅವರ ಕೊನೆಯ ಮಾತುಗಳನ್ನು ಕೇಳಲಾಗದಿದ್ದರೂ ಓದಿಯಾದರೂ ತಿಳಿದುಕೊಳ್ಳುವ ಹಂಬಲವಿದ್ದರೆ ಓಮ್ಮೆಯಾದರೂ ಓದಿ…

ಕೆಳಗೆ 👇👇 ಕೊಟ್ಟಿರುವ ಲಿಂಕ್ (Link) ಮೂಲಕ ನಿಮಗೆ ಓದಲು ಕುತೂಹಲವಿರುವ ಪುಸ್ತಕವನ್ನು ಇಂದೇ ಆರ್ಡರ್ (Order) ಮಾಡಿ… (Order the book you are interested in reading today through the link given below 👇👇…)

https://pustakamane.com/shop-2
https://shorturl.at/uYRpY
https://shorturl.at/8V4hj

LEAVE A REPLY

Please enter your comment!
Please enter your name here