ಪುತ್ತೂರು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿವೃತ್ತ ಉಪಮಹಾಪ್ರಬಂಧಕ, ಒಡಿಯೂರು ಶ್ರೀ ವಿವಿದ್ದೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಅನಂತಾಡಿ ನಿವಾಸಿ ಕೊಂಬಿಲ ಉಗ್ಗಪ್ಪ ಶೆಟ್ಟಿ (73ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.1 ರಂದು ನಿಧನರಾದರು.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಉಗ್ಗಪ್ಪ ಶೆಟ್ಟಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಪದ್ಮಾವತಿ ಶೆಟ್ಟಿ, ಪುತ್ರ ಶ್ಯಾಮಪ್ರಸಾದ್, ಪುತ್ರಿ ಅಕ್ಷತಾ ರೈ, ಸಹೋದರ ಪುತ್ತೂರು ಗೃಹ ನಿರ್ಮಾಣ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ಅವರನ್ನು ಅಗಲಿದ್ದಾರೆ.