ಪುತ್ತೂರು: ಮಧೂರು ದೇವಸ್ಥಾನದ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆಯ ಪ್ರಯುಕ್ತ ಪುತ್ತೂರಿನ ಸ್ವರ ಮಾಧುರ್ಯ ಸಂಗೀತ ಬಳಗದ ಸೋನಿಕ ಜನಾರ್ದನ್ ಮತ್ತು ತಂಡದವರಿಂದ ಗಾನ ಮಾಧುರ್ಯ ಭಕ್ತಿ ಸಂಗೀತ ಕಾರ್ಯಕ್ರಮ ಏ.5 ಪೂರ್ವಾಹ್ನ 11 ರಿಂದ 12.30 ರ ತನಕ ವೇದಿಕೆ -2ರಲ್ಲಿ ನಡೆಯಲಿದೆ.
ಕಾವ್ಯಶ್ರೀ ಗಡಿಯಾರ ಮತ್ತು ಬಾಲಕೃಷ್ಣ ನೆಟ್ಟಾರ್ ಗಾಯನದಲ್ಲಿ ಸಹಕರಿಸಲಿದ್ದಾರೆ. ಸಂಗೀತ ಕಲಾವಿದರ ಹಿನ್ನೆಲೆ ಸಂಗೀತ ತಂಡ ಬಾಬಣ್ಣ ಪುತ್ತೂರು ಮೆಂಡೋಲಿನ್, ಸಚಿನ್ ಪುತ್ತೂರು ರಿದಂ ಪ್ಯಾಡ್, ಅಶ್ವಿನ್ ಪುತ್ತೂರು ಕೀಬೋರ್ಡ್, ಜಗದೀಶ್ ಉಪ್ಪಳ ತಬಲ, ಸಂತೋಷ್ ವಿಟ್ಲ ಕೊಳಲುನಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕರಾಗಿ ಡಾ. ಲೀಲಾಧರ್ ಡಿ.ವಿ
ಪ್ರಾಂಶುಪಾಲರು ಕೆ .ವಿ .ಜಿ ಆಯುರ್ವೇದ ಕಾಲೇಜು ಸುಳ್ಯ, ಮಹೇಶ್ ಕಜೆ ವಕೀಲರು ಪುತ್ತೂರು, ಎಂ ವೆಂಕಪ್ಪ ಗೌಡ ವಕೀಲರು ಸುಳ್ಯ, ಬಾಬು ರಾಜ್ ಪಿ, ವಕೀಲರು ಕಾಸರಗೋಡು, ಜಯರಾಜ್ ರೈ ವಕೀಲರು ಮಂಗಳೂರು, ಪದ್ಮರಾಜ್ ಪೂಜಾರಿ ಕೋಶಾಧಿಕಾರಿ ಶ್ರೀ ಕ್ಷೇತ್ರ ಕುದ್ರೋಳಿ, ಜಯಂತ್ ನಡುಬೈಲು ಅಧ್ಯಕ್ಷರು ಆಡಳಿತ ಮಂಡಳಿ ಅಕ್ಷಯ ಕಾಲೇಜು ಪುತ್ತೂರು, ಹರೀಶ್ ಪಿ, ಮುಖ್ಯಸ್ಥರು ಮೈಕ್ರೋನಿಕ್ಸ್ ಬೆಂಗಳೂರು, ಚಂದ್ರಹಾಸ ರೈ, ಕಾರ್ಯನಿರ್ವಹಣಾಧಿಕಾರಿ ಅಳಿಕೆ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಅರ್ಜುನ್ ಕಾಸರಗೋಡು ಸಹಕರಿಸಿದ್ದಾರೆ. ಸಿಶೇ ಕಜೆಮಾರ್‌ರವರ ಮಾಧ್ಯಮ ಸಹಕಾರವಿದೆ ಎಂದು ಸ್ವರ ಮಾಧುರ್ಯ ಸಂಗೀತ ಬಳಗದ ಪ್ರಕಟಣೆ ತಿಳಿಸಿದೆ.