ಕಾಣಿಯೂರು: ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಕಾಣಿಯೂರು ಬ್ಯಾಂಕ್ ಆಫ್ ಬರೋಡಾ, ಕಾಣಿಯೂರು ಗ್ರಾಮ ಪಂಚಾಯತ್ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಾಣಿಯೂರು ಅಂಚೆ ಕಛೇರಿಗೆ ಎ.3ರಂದು ಭೇಟಿ ನೀಡಿ ವಿವಿಧ ಮಾಹಿತಿಯನ್ನು ಪಡೆದುಕೊಂಡರು.
ಬ್ಯಾಂಕ್ ಆಫ್ ಬರೋಡಾಗೆ ಭೇಟಿ
ಕಾಣಿಯೂರು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ಯಾಂಕ್ ನ ಪ್ರಬಂಧಕರಾದ ಅತಿಥ್ ರೈ ಅವರು ಮಾಹಿತಿ ನೀಡಿ, ಬ್ಯಾಂಕ್ ಜೊತೆಗಿನ ವ್ಯವಹಾರ ಮತ್ತು ಬ್ಯಾಂಕಿಂಗ್ ಸೇವೆ ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಚಾರ್ವಾಕ ಸಿ.ಎ ಬ್ಯಾಂಕ್ ಗೆ ಭೇಟಿ:
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ಅವರು ಮಾಹಿತಿ ನೀಡಿ, ಸಂಘದಿಂದ ದೊರೆಯುವ ಸೇವೆಯನ್ನು ವಿವರಿಸಿದರು. ಸಂಘದ ಲಾಕಾರ್ ಕೊಠಡಿ, ಸಿ.ಸಿ ಟಿವಿ ಕಂಟ್ರೋಲ್ ಕೊಠಡಿ, ನ್ಯಾಯಬೆಲೆ ಕೊಠಡಿಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪರಮೇಶ್ವರ ಗೌಡ ಅನಿಲ, ಅನಂತಕುಮಾರ್ ಬೈಲಂಗಡಿ, ರಮೇಶ್ ಉಪ್ಪಡ್ಕ ಮತ್ತು ಸಿಬ್ಬಂದಿಗಳಾದ ಭವತ್, ದುರ್ಗಾ ಪ್ರಸಾದ್, ವಸಂತಿ, ಕೀರ್ತಿ ಕುಮಾರ್, ವೇಣುಗೋಪಾಲ್ ಉಪಸ್ಥಿತರಿದ್ದರು.
ಕಾಣಿಯೂರು ಗ್ರಾ.ಪಂಗೆ ಭೇಟಿ :
ಕಾಣಿಯೂರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ವಿದ್ಯಾರ್ಥಿಗಳು, ಗ್ರಂಥಾಲಯ ಮತ್ತು ಪಂಚಾಯತ್ ಕಚೇರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯದ್ವಾರದ ರಸ್ತೆಗೆ ಕಾಂಕ್ರಿಟ್ ಮತ್ತು ಕಸದ ತೊಟ್ಟಿ ಒದಗಿಸಿಕೊಡುವಂತೆ ಶಾಲಾ ಮುಖ್ಯಗುರು ಶಶಿಕಲಾ ಅವರು ಬೇಡಿಕೆಗಳನ್ನು ಸಿಬ್ಬಂದಿಯವರಲ್ಲಿ ಇಟ್ಟರು. ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬೀರುಕುಡಿಕೆ, ಚಿತ್ರಾ, ಕುಮಾರ್ ಶಶಿಕಲಾ, ರಕ್ಷಿತ್, ಪಾರ್ವತಿ, ಧನಂಜಯ ಉಪಸ್ಥಿತರಿದ್ದರು.
ಅಂಚೆ ಕಚೇರಿಗೆ ಭೇಟಿ:
ಕಾಣಿಯೂರು ಅಂಚೆ ಕಚೇರಿಗೆ ನೀಡಿದ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಜಯ. ಬಿ. ಅವರು ಅಂಚೆ ಕಚೇರಿಯಲ್ಲಿ ದೊರೆಯುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಶಶಿಕಲಾ, ಶಿಕ್ಷಕಿಯರಾದ ಶೋಭಿತಾ, ಶೃತಿ, ಎಸ್. ಡಿ.ಎಂ.ಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಸದಸ್ಯ ಸುಧಾಕರ್ ಕಾಣಿಯೂರು ಉಪಸ್ಥಿತರಿದ್ದರು.