ಆಲಂಕಾರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮಾತೃಕೃಪಾ ಕಾಂಪ್ಲೆಕ್ಸ್ನಲ್ಲಿ ಮಹಾಲಕ್ಷ್ಮೀ ಫ್ಯಾನ್ಸಿ ಎ.2ರಂದು ಶುಭಾರಂಭಗೊಂಡಿತು.

ನಿವೃತ್ತ ಮುಖ್ಯಶಿಕ್ಷಕ, ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯ ಸಮಿತಿ ಮಾಜಿ ಅಧ್ಯಕ್ಷರೂ ಆದ ನಾಗಪ್ಪ ಗೌಡ ಮರುವಂತಿಲ ಅವರು ನೂತನ ಮಳಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಡಬ ತಾಲೂಕಿನ ಪ್ರಮುಖ ಕೇಂದ್ರವಾಗಿರುವ ಆಲಂಕಾರು ಪೇಟೆ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ. ಇಲ್ಲಿಗೆ ಹೊಸ ಹೊಸ ಉದ್ದಿಮೆ, ಅಂಗಡಿಗಳೂ ಬರುತ್ತಿವೆ. ಇವೆಲ್ಲವೂ ಊರಿನ ಅಭಿವೃದ್ಧಿಗೆ ಪೂರಕವಾಗಿದೆ. ಆಲಂಕಾರಿನಂತಹ ಸಣ್ಣ ಪಟ್ಟಣದಲ್ಲಿ ಆರಂಭಗೊಂಡಿರುವ ಮಹಾಲಕ್ಷ್ಮೀ ಫ್ಯಾನ್ಸಿಯಲ್ಲಿ ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳೂ ಒಂದೇ ಸೂರಿನಡಿಯಲ್ಲಿ ದೊರೆಯುವುದರಿಂದ ಇಲ್ಲಿನ ಜನರು ದೊಡ್ಡ ದೊಡ್ಡ ಪಟ್ಟಣಗಳಿಗೆ ಹೋಗುವಂತಹ ಅವಶ್ಯಕತೆ ಇಲ್ಲ. ಇಲ್ಲಿಯೇ ವ್ಯವಹರಿಸುವ ಮೂಲಕ ಈ ಸಂಸ್ಥೆಯನ್ನು ಬೆಳೆಸಬೇಕು. ಈ ಮೂಲಕ ನಮ್ಮೂರಿನ ಅಭಿವೃದ್ಧಿಯೂ ಆಗಲಿದೆ ಎಂದು ಹೇಳಿದ ಅವರು, ನೂತನ ಮಳಿಗೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ರಾಮಣ್ಣ ಗೌಡ ಸುರುಳಿ, ಮಾತೃಕೃಪಾ ಕಾಂಪ್ಲೆಕ್ಸ್ನ ಮಾಲಕರಾದ ಕುಶಾಲಪ್ಪ ಗೌಡ ಸುರುಳಿ, ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ತಾ.ಪಂ.ಮಾಜಿ ಸದಸ್ಯ ದಯಾನಂದ ಗೌಡ ಆಲಡ್ಕ, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಕುಂಞಲಡ್ಡ, ಆಲಂಕಾರು ರಾಜಾರಾಮ್ ಗಾರ್ಮೆಂಟ್ಸ್ನ ಮಾಲಕ ಗೋಪರಾಮ್ ಪಟೇಲ್, ಸತೀಶ್ ಕುಮಾರ್ ತಂಟೆಪ್ಪಾಡಿ, ಸವಿತಾ ತಲ್ಲೂರು ಸೇರಿದಂತೆ ಆಲಂಕಾರಿನ ವರ್ತಕರು, ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ಸಂಸ್ಥೆಗೆ ಶುಭಹಾರೈಸಿದರು.

ಮಹಾಲಕ್ಷ್ಮೀ ಫ್ಯಾನ್ಸಿ ಮಾಲಕರಾದ ಲೂಂಬಾರಾಮ್ ಪಟೇಲ್ ಸ್ವಾಗತಿಸಿದರು. ಸಹ ಮಾಲಕರಾದ ರಮೇಶ್ ಪಟೇಲ್ ವಂದಿಸಿದರು. ಶಾಂತಿದೇವಿ ಲೂಂಬಾರಾಮ್ ಪಟೇಲ್, ಮಂಜು ಪಟೇಲ್, ಮಮತಾ ಪಟೇಲ್, ಆಲಂಕಾರು ಮಹಾಲಕ್ಷ್ಮೀ ಫ್ಯಾನ್ಸಿ ಸಿಬ್ಬಂದಿಗಳಾದ ರಾಮ್ನಿವಾಸ್ ಬಿಷ್ಣೋಯಿ, ಮಹೇಶ್ ಪಟೇಲ್, ಪುಷ್ಪಲತಾ ಕೋಲ್ಪೆತ್ತಿಮಾರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳು ಲಭ್ಯ:
ಆಲಂಕಾರಿನಲ್ಲಿ ಆರಂಭಗೊಂಡಿರುವ ಮಹಾಲಕ್ಷ್ಮೀ ಫ್ಯಾನ್ಸಿಯಲ್ಲಿ ಎಲ್ಲಾ ರೀತಿಯ ಫ್ಯಾನ್ಸಿ ಐಟಂಗಳು, ಕಾಸ್ಮೆಟಿಕ್ಸ್, ಗಿಫ್ಟ್ ಮತ್ತು ಟಾಯ್ಸ್, ಇಮಿಟೇಶನ್ ಜ್ಯುವೆಲ್ಲರಿ, ಬುಕ್ಸ್ ಮತ್ತು ಸ್ಟೇಷನರಿ, ಸ್ಕೂಲ್ ಬ್ಯಾಗ್ಸ್, ಹೋಮ್ ಎಪ್ಲಾಯನ್ಸಸ್, ಪ್ಲಾಸ್ಟಿಕ್ ಐಟಮ್ಗಳು ಲಭ್ಯವಿದೆ. ಗ್ರಾಹಕರು ನಮ್ಮೊಂದಿಗೆ ವ್ಯವಹರಿಸುವ ಮೂಲಕ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿನಂತಿ. ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಮೊ: 9353846370, 8209759755ಗೆ ಸಂಪರ್ಕಿಸಬಹುದಾಗಿದೆ.
-ರಮೇಶ್ ಪಟೇಲ್, ಸಹ ಮಾಲಕರು
ಮಹಾಲಕ್ಷ್ಮೀ ಫ್ಯಾನ್ಸಿ, ಆಲಂಕಾರು