ಕಾಣಿಯೂರು: ಪರೀಕ್ಷೆಯ ನಂತರ ವಿದ್ಯಾರ್ಥಿಗಳನ್ನು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕುದ್ಮಾರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಂಭ್ರಮ ಕಲಿಕೆ 2 ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಶಿಬಿರ ದ ಉದ್ಘಾಟನಾ ಕಾರ್ಯಕ್ರಮವು ಎ.3ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ, ದೇವರಾಜ್ ನೂಜಿ ವಹಿಸಿದ್ದರು. ಕಾರ್ಯಕ್ರಮವನ್ನು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೋಡಂಗೆ ಇವರು ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ ರಮೇಶ್ ಉಳಯ, ಎಸ್ ಡಿಎಂಸಿ ಉಪಾಧ್ಯಕ್ಷೆ ನವ್ಯಾ ಅನ್ಯಾಡಿ, ಕಡಬ ತಾಲೂಕಿನ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾ ಹಾಗೂ ಶಾಲಾ ಮುಖ್ಯ ಗುರು ಕುಶಾಲಪ್ಪ ಬಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರು ಕುಶಾಲಪ್ಪ ರವರು ಸ್ವಾಗತಿಸಿ, ಶಿಕ್ಷಕಿ ವೀಣಾ ವಂದಿಸಿದರು. ಶಿಕ್ಷಕಿ ಸುಜಾತಾ ಬಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.
ಸಂಪನ್ಮೂಲ ವ್ಯಕ್ತಿಯಾದ ರಮೇಶ್ ಉಳಯ ಇವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ ಹಾಡು, ಚುಟುಕು ರಚನೆ, ಹಾಗೂ ಇನ್ನಿತರ ಭಾಷಾ ಆಟಗಳು, ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕಾದ ಆತ್ಮಸ್ಥೈರ್ಯ ತುಂಬಿಸುವ ಸಂಬಂಧಿ ಚಟುವಟಿಕೆಗಳು, ಸ್ವ ಅಭಿವೃದ್ಧಿ ಪಡೆಸಿಕೊಳ್ಳಬೇಕಾದ ವಿವಿಧ ಕೌಶಲ್ಯಗಳ ಬಗೆಗೆ ಆಸಕ್ತಿ ದಾಯಕ ತರಗತಿಯನ್ನು ನಡೆಸಿಕೊಟ್ಟರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರವರು ಹಳೆಯ ದಿನಪತ್ರಿಕೆಗಳನ್ನು ಉಪಯೋಗಿಸಿ ಗೊಂಬೆ, ರಟ್ಟುಗಳಿಂದ ಪೆನ್ ಸ್ಟ್ಯಾಂಡ್ ಹಾಗೂ ಹೂದಾನಿ, ಅಲ್ಲದೆ ಪೇಪರ್ ಕಪ್ ಗಳಿಂದ ಗೊಂಬೆ ಹಾಗೂ ಇನ್ನಿತರ ಕರಕುಶಲ ವಸ್ತುಗಳ ತಯಾರಿಕೆಯನ್ನು ತಿಳಿಸಿಕೊಟ್ಟರು.