ಸಂತ ವಿಕ್ಟರನ ಆ.ಮಾ. ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

0

ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು.
ಮುಖ್ಯ ಶಿಕ್ಷಕ ಹ್ಯಾರಿ ಡಿಸೋಜ ಮಾತನಾಡಿ ಸುಮಾರು 9 ವರ್ಷಗಳ ಕಾಲ ಇಲ್ಲಿ ಕಲಿಕೆಯನ್ನು ಪಡೆದಂತಹ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹ ಮಾತನಾಡಿ ಶುಭ ಹಾರೈಸಿದರು. ಶಾಲಾ ಸಂಚಾಲಕ ವಂ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಕಲಿತು ದೊಡ್ಡವರಾಗಿ ಶಾಲೆಯ ಹೆಸರನ್ನು ಉಳಿಸಿ ಶಾಲೆಗೆ ಘನತೆ ಗೌರವವನ್ನು ತಂದು ಕೊಡಿ. ಸತ್ಕರ್ಮದ ಮಾರ್ಗಗಳ ಮೂಲಕವೇ ಉನ್ನತ ಸ್ಥಾನವನ್ನೇರಿ ಎಂದು ತಿಳಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿ ಸನಿಹ ಮಾತನಾಡಿ 7ನೇ ತರಗತಿಯ ವಿದ್ಯಾರ್ಥಿಗಳೊಂದಿಗಿದ್ದ ಒಡನಾಟದ ಬಾಂಧವ್ಯವನ್ನು ತಿಳಿಸಿದರು. ಏಳನೇ ತರಗತಿಯ ವಿದ್ಯಾರ್ಥಿಗಳಾದ ಮೆವಿಸ್ಸ ಏಂಜೆಲ್ ಡಿಸೋಜಾ, ಸಾಕ್ಷಾತ್ ಮತ್ತು ಆಯಿಷಾ ಶೆಹಿಮ ಮಾತನಾಡಿ ಇಷ್ಟು ವರ್ಷಗಳ ಕಾಲ ಶಿಕ್ಷಣವನ್ನು ಪಡೆದ ಈ ಶಾಲೆಯನ್ನು ಬಿಟ್ಟು ಹೋಗುವುದು ಅನಿವಾರ್ಯವೆಂದು ತಿಳಿಸಿದರು.

ಏಳನೇ ತರಗತಿಯ ವಿದ್ಯಾರ್ಥಿಗಳು ಶಾಲೆಯ ಏಳಿಗೆಗಾಗಿ ಸಂಗ್ರಹಿಸಿದ ಮೊತ್ತವನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. 6ನೇ ತರಗತಿಯ ವಿದ್ಯಾರ್ಥಿಗಳು ಏಳನೇ ತರಗತಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಕೆ ಗೀತೆಗಳ ಹಾಡಿ ಶುಭಹಾರೈಸಿದರು. ವಿದ್ಯಾರ್ಥಿ ವೈಭವ್ ಸ್ವಾಗತಿಸಿದರು.ಮಾನ್ವಿ ಭಂಡಾರಿ ಹಾಗೂ ಹನಿಹ ಬಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಆದ್ಯ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here