ಪುತ್ತೂರು: ಪುತ್ತೂರು ಹಾರಾಡಿಯ ಮೂಕಾಂಬಿಕಾ ಗ್ಯಾಸ್ ಏಜೆನ್ಸಿಸ್ ಸಂಸ್ಥೆಯ ಮಾಲಕ ಸಂಜೀವ ಆಳ್ವ ಇವರು ವಿವೇಕಾನಂದ ಕನ್ನಡ ಶಾಲೆಯ ಅನ್ನಪೂರ್ಣ ಮಕ್ಕಳ ಮಧ್ಯಾಹ್ನದ ಬಿಸಿ ಊಟ ಯೋಜನೆಗೆ 2 ಲಕ್ಷ ರೂ.ದೇಣಿಗೆ ನೀಡಿದ್ದಾರೆ .
ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಅಶೋಕ ಕುಂಬಳೆ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕರಾದ ಆಶಾ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ನಳಿನಿ ವಾಗ್ಲೆ ಇವರು 2 ಲಕ್ಷ ರೂ ಚೆಕ್ ಅನ್ನು ಸ್ವೀಕರಿಸಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಶಾಲಾ ಆಡಳಿತ ಮಂಡಳಿ, ಪೋಷಕ, ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರ ಪರವಾಗಿ ಸಂಜೀವ ಆಳ್ವ ಹಾರಾಡಿಯವರಿಗೆ ಕೃತಜ್ಞತೆ ಅರ್ಪಿಸಿದರು.
Home ಇತ್ತೀಚಿನ ಸುದ್ದಿಗಳು ಮೂಕಾಂಬಿಕಾ ಗ್ಯಾಸ್ ಏಜೆನ್ಸಿಸ್ ಮಾಲಕ ಸಂಜೀವ ಆಳ್ವರಿಂದ ವಿವೇಕಾನಂದ ಕನ್ನಡ ಶಾಲೆಗೆ 2 ಲಕ್ಷ ರೂ...