ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ನೀಡಲಾದ ನವೋದಯ ಸಮವಸ್ತ್ರ ವಿತರಣೆ

0

ಪುತ್ತೂರು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ,ಬಂಟ್ವಾಳ ತಾಲ್ಲೂಕು ಬಾಳ್ತಿಲ,ಗೊಳ್ತಮಜಲು, ಅಮ್ಟೂರು, ಬೊಳಂತೂರು ಹಾಗೂ ವೀರಕಂಭ ಗ್ರಾಮದ ನವೋದಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾದ ನವೋದಯ ಸಮವಸ್ತ್ರವನ್ನು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಯವರು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ವಿತರಣೆ ಮಾಡಿದರು.


ಈ ಸಂದರ್ಭ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಲ್ಲಡ್ಕ ಶಾಖೆಯ ಶಾಖಾ ವ್ಯವಸ್ಥಾಪಕಿ ಮೀನಾಕ್ಷಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ.ಕೆ , ಬಾಳ್ತಿಲ ವಲಯ ನವೋದಯ ಪ್ರೇರಕಿ ಲಕ್ಷ್ಮಿ , ಕೆದಿಲ ವಲಯ ನವೋದಯ ಪ್ರೇರಕಿ ಮೋಹಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here