ಪುತ್ತೂರು: ಪುತ್ತೂರಿನ ಪ್ರಥಮ ಪ್ಲೇ ಸ್ಟೇಷನ್ ಗೇಮಿಂಗ್ ಸೆಂಟರ್ ಕಾಸ್ಮಿಕ್ ಗೇಮ್ಸ್ ಎ.9ರಂದು ದರ್ಬೆ ಬೈಪಾಸ್ ರಸ್ತೆಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಮುಂಭಾಗದ ಲಕ್ಷ್ಮೀ ಆರ್ಕೆಡ್‌ನಲ್ಲಿ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಉದ್ಘಾಟಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಪ್ಲೇ ಸ್ಟೇಷನ್ ಗೇಮಿಂಗ್ ಸೆಂಟರ್ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪ್ರಾರಂಭಗೊಂಡಿದೆ. ಇದರಿಂದಾಗಿ ಮಕ್ಕಳಲ್ಲಿ ಬುದ್ದಿ ಶಕ್ತಿ ವೃದ್ದಿಯಾಗಲು ಇದು ಸಹಕಾರಿಯಾಗಲಿದೆ. ಈ ಆಟದಲ್ಲಿ ಭಾಗವಹಿಸುವ ಮುಖಾಂತರ ಮಕ್ಕಳು ದುರಭ್ಯಾಸಗಳಿಗೆ ಬಲಿಯಾಗುವುದಕ್ಕೆ ಕಡಿವಾಣ ಹಾಕಬಹುದು. ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿರುವ ಸಂಸ್ಥೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸಹಕಾರ ನೀಡಲಾಗುವುದು ಎಂದರು.
ಕಾಸ್ಮಿಕ್ ಗೇಮ್ಸ್‌ನ ಪ್ರಮೋಟರ್ ಸುಪ್ರೀತ್ ಪ್ರಭು ಮಾತನಾಡಿ, ಕಾಸ್ಮಿಕ್ ಗೇಮ್ಸ್‌ನಲ್ಲಿ ನಮ್ಮಲ್ಲಿ FIFA, Gear club (car racing), Call of Duty (shooting), GTA (action), WWE (fighting) Mortal Combat (fighting) ಮೊದಲಾದ ಗೇಮ್ಸ್‌ಗಳಿವೆ. ಇಲ್ಲಿ ಆಡುವವರಿಗೆ ಬಹಳಷ್ಟು ಮನರಂಜನೆ ನೀಡಲಿದೆ. ಸ್ನೇಹಿತರೊಂದಿಗೆ ಸಮಯ ಕಲೆಯಲು ಉತ್ತಮ ಕೇಂದ್ರವಾಗಿದೆ. ಇಲ್ಲಿನ ಉತ್ತಮ ಆಟದ ಅನುಭವ ದೊರೆಯಲಿದೆ. ಎಲ್ಲಾ ವಯಸ್ಸಿನವರಿಗೂ ಇದರಲ್ಲಿ ಆಟವಾಡಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಟೂರ್ನ್‌ಮೆಂಟ್‌ಗಳನ್ನು ಆಯೋಜಿಸಿಕೊಳ್ಳಲಾಗುವುದು. ಹೊಸದಾಗಿ ಪ್ರಾರಂಭಗೊಂಡಿರುವ ಮಳಿಗೆ ಎಲ್ಲರ ಸಹಕರಿಸುವಂತೆ ವಿನಂತಿಸಿದರು.
ಜೀವನ್ ನಾಯಕ್, ನರಸಿಂಹ ಪೈ, ಕಾವೇರಿ ರೆಫ್ರೀಜರೇಷನ್‌ನ ಶ್ರೀಕಾಂತ್ ಕೊಳತ್ತಾಯ, ಲಕ್ಷ್ಮೀ ಹೊಟೇಲ್‌ನ ಮ್ಹಾಲಕ ಸುಧೀರ್ ನೋಂಡಾ, ಎಚ್.ನಾರಾಯಣ ಎಂಡ್ ಸನ್ಸ್ ಜವುಳಿ ಮಳಿಗೆಯ ಉದಯ ಕುಮಾರ್, ಸತೀಶ್ ರೈ ಕಟ್ಟಾವು, ಶಿವಂ ಕಂಪ್ಯೂಟರ‍್ಸ್‌ಮ ಸುದರ್ಶನ್ ರೈ ನೀರ್ಪಾಡಿ, ಪಾಲುದಾರ ಅಭಿಮನ್ಯು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ತೃಷಾ ಸ್ವಾಗತಿಸಿ, ವಂದಿಸಿದರು.
ಜಾತ್ರೋತ್ಸವದ ವಿಶೇಷ ಕೊಡುಗೆ…!
ನೂತನವಾಗಿ ಪ್ರಾರಂಭಗೊಂಡಿರುವ ಮಳಿಗೆಯಲ್ಲಿ ಎ.10ರಿಂದ 20ರ ತನಕ ನಡೆಯಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ 10 ದಿನಗಳ ಕಾಲ ಪ್ರತಿ ದಿನ ಪ್ರಥಮ ಅರ್ಧತಾಸುಗಳ ಕಾಲ ಉಚಿತವಾಗಿ ಆಟವಾಡುವ ವಿಶೇಷ ಕೊಡುಗೆಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.