ಮೂಡುಪಡುಕೋಡಿ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಮೂಡುಪಡುಕೋಡಿ ಇಲ್ಲಿ ಮನ್ ಶರ್ ಪ್ಯಾರ ಮೆಡಿಕಲ್ ಕಾಲೇಜು ಗೇರುಕಟ್ಟೆ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಾಮತ್ ಆಪ್ಟಿಕಲ್ಸ್ ಮಂಗಳೂರು ಇದರ ವತಿಯಿಂದ ಉಚಿತ ಕಣ್ಣು ಪರೀಕ್ಷಾ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಅನೇಕ ಜನರ ಆರೋಗ್ಯ ತಪಾಸಣೆ, ಕಣ್ಣು ತಪಾಸಣೆ ನಡೆಸಲಾಯಿತು.ಇದನ್ನು ಗ್ರಾಮದ ಹಾಗೂ ಸುತ್ತಮುತ್ತಲಿನ ಬಡ ಜನರ ಹಿತದೃಷ್ಟಿಯಿಂದ ಉಚಿತವಾಗಿ ಈ ಶಿಬಿರ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಮನ್ ಶರ್ ವಿದ್ಯಾಲಯದ ಸಂಸ್ಥಾಪಕ ಹೈದರ್ ಮರ್ದಾಳ, ಬುರೂಜ್ ಶಾಲಾ ಸಂಸ್ಥಾಪಕ ಶೇಖ್ ರಹ್ಮತ್ತುಲ್ಲಾಹ್, ಪುಂಜಾಲಕಟ್ಟೆ ಖತೀಬರಾದ ಇಸ್ಮಾಯಿಲ್ ಪೈಝಿ, ಹೈಸ್ಕೂಲ್ ವಿಭಾಗದ ಮುಖ್ಯಸ್ಥೆ ಜಯಶ್ರೀ ಸಾಲ್ಯಾನ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಎಲ್ಸಿ ಲಸ್ರಾದೋ, ಎಲ್ಲಾ ಶಿಕ್ಷಕರು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಹಾಫಿಳಾ ಸ್ವಾಗತಿಸಿದರು. ಪ್ರತೀಕ್ಷಾ ಹರೀಶ್ ಧನ್ಯವಾದಗೈದರು. ಜಯಶ್ರೀ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.