ಪುತ್ತೂರು: ಕುಂಜೂರುಪಂಜ ಅಂಗನವಾಡಿ ಕೇಂದ್ರದ ಹಿರಿಯ ಮಕ್ಕಳ ಬೀಳ್ಕೊಡುಗೆ ಸಮಾರಂಭ ಎ.9ರಂದು ನಡೆಯಿತು.
ಶಿಶು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಮಾತನಾಡಿ, ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿಯ ಅಭಿವೃದ್ಧಿಗೆ ಸಹಕರಿಸಿದ ಸ್ಥಳೀಯರಾದ ಗಿರೀಶ್ ನಾಯ್ಕ್, ಗೋಪಾಲಕೃಷ್ಣ ನಾಯಕ್ ಮತ್ತು ರಾಮಚಂದ್ರ ಪ್ರಭು ಗೋಳಿತ್ತಡಿ ಇವರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪೋಷಕಿ ಅಂಕಿತ.ಜಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ನಳಿನಿ ಇವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಶರ್ಮಿಳ ವಂದಿಸಿದರು.

ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲಿರುವ ಅಂಗನವಾಡಿಯ ಹಿರಿಯ ಮಕ್ಕಳಿಗೆ ಅಂಗನವಾಡಿ ವತಿಯಿಂದ ಸ್ಮರಣಿಕೆಯನ್ನು ನೀಡಲಾಯಿತು. ಹಾಗೂ ಹಿರಿಯ ಮಕ್ಕಳು ತಮ್ಮ ವತಿಯಿಂದ ಅಂಗನವಾಡಿಗೆ ವಿವಿಧ ನೆನಪಿನ ಕಾಣಿಕೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಬಾಲಾವಿಕಾಸ ಸಮಿತಿಯ ಅಧ್ಯಕ್ಷೆ ನಮಿತಾ, ಪ್ರಗತಿಪರ ಕೃಷಿಕ ರಾಮಚಂದ್ರ ಪ್ರಭು, ಒಳತ್ತಡ್ಕ ಆರೋಗ್ಯ ಉಪಕೇಂದ್ರದ ಸಿ.ಹೆಚ್.ಒ ಕುಮಾರಿ ಅಶ್ವಿನಿ ಮತ್ತು ಆಶಾ ಕಾರ್ಯಕರ್ತೆಯರು, ಪೋಷಕರು ಹಾಗೂ ಅಂಗನವಾಡಿ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.