ದ್ವಿತೀಯ ಪಿಯುಸಿ ಫಲಿತಾಂಶ – ಮಂಗಳೂರಿನ ಶಕ್ತಿ ಪ.ಪೂ. ಕಾಲೇಜಿಗೆ ರಾಜ್ಯ ಮಟ್ಟದಲ್ಲಿ ನಾಲ್ಕು ರ‍್ಯಾಂಕ್

0

ವಿಟ್ಲ: ಶಕ್ತಿ ನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ವಾಣಿಜ್ಯ ವಿಭಾಗದ ರಿಚಾ ಗಣೇಶ್ ದಲ್ವಿ 595 ಅಂಕವನ್ನು ಪಡೆಯುವುದರ ಮೂಲಕ 5ನೇ ರ‍್ಯಾಂಕ್, ನೈದಿಲೆ 592ಅಂಕ ಪಡೆದು 7ನೇ ರ‍್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಸ್ಟೀವ್ ಜೆಫ್ ಲೋಬೊ 591 ಅಂಕ ಪಡೆದು 9ನೇ ರ‍್ಯಾಂಕ್, ಅಶ್ವತ್ ಅಜಿತ್ ಪೈ 590 ಅಂಕ ಪಡೆದು 10ನೇ ರ‍್ಯಾಂಕ್ ಪಡೆದಿರುತ್ತಾರೆ. 

ವಿಜ್ಞಾನ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 117 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ವಿಜ್ಞಾನ ವಿಭಾಗದ ಪಿಸಿಎಮ್ಸಿಯಲ್ಲಿ ಸ್ಟೀವ್ ಜೆಫ್ ಲೋಬೊ 591, ಪಿಸಿಎಂಬಿ- ಅಶ್ವತ್ ಅಜಿತ್ ಪೈ 590, ಪಿಸಿಎಮ್ಸಿ -ವರ್ಷಿಣಿ ಡಿ ಎನ್ 583, ಪಿಸಿಎಮ್ಸಿ – ರಕ್ಷಾ ಎಲ್ ಪೈ 582, ಪಿಸಿಎಂಬಿ- ಸಮುದ್ಯಾತಾ 580, ಪಿಸಿಎಂಬಿ -ಅಭಿಜ್ಞಾ 580, ಪಿಸಿಎಂಬಿ- ನಾಗವರ್ಷಿಣಿ ಕೆ. ಆರ್. 578, ಪಿಸಿಎಮ್ಸಿ – ಪದ್ಮಾವತಿ ಜಿ.ಆರ್ 577, ಪಿಸಿಎಮ್ಸಿ- ಅನಘ ವಿ ಭಟ್ 577, ಪಿಸಿಎಮ್ಸಿ -ಅರಿಕ್ತ ಸಿ.ಆರ್. 576 ಅಂಕ ಗಳಿಸಿದ್ದಾರೆ. 

ವಾಣಿಜ್ಯ ವಿಭಾಗದ ಇಬಿಎಎಸ್  ಯಲ್ಲಿ ರಿಚಾ ಗಣೇಶ್ ದಲ್ವಿ 595, ಇಬಿಎಸಿ-ನೈದಿಲೆ 592, ಇಬಿಎಸಿ- ಜೀವನ್ ಎಲ್ ಕಮ್ಟಿ 581 ಅಂಕ ಗಳಿಸಿರುತ್ತಾರೆ. 

ಬಹಳ ವಿದ್ಯಾರ್ಥಿಗಳು 100 ಕ್ಕೆ 1೦೦ ಅಂಕ ಪಡೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿರುತ್ತಾರೆ. ಕನ್ನಡದಲ್ಲಿ ಕರುಣ ವಿ ಹಿರೆಗೌಡರ್, ಸಿರಿ ಕೊಲಿ, ಕೌಶಿಕ್ ವಿ ಎಮ್ 1೦೦ ಅಂಕ ಪಡೆದಿರುತ್ತಾರೆ. ಸಂಸ್ಕೃತದಲ್ಲಿ ವರ್ಷಿಣಿ ಡಿ.ಎನ್. ಅಬಿಜ್ಞಾ, ಸಾನ್ವಿ ಅಗರಿ ಹರಿಕಿಶೋರ್, ಹರ್ಷಿತ್ ಆರ್ ಸುವರ್ಣ, ಲಹರಿ ಶೆಟ್ಟಿ, ಕುಶಿ ಎ ಪೂಜಾರಿ, ಸಿಂಚನಾ ಎಮ್, ಕೌಶಿಕ್ 1೦೦ ಅಂಕ ಪಡೆದಿರುತ್ತಾರೆ. ರಾಸಾಯನ ಶಾಸ್ತ್ರದಲ್ಲಿ ಅಶ್ವತ್ ಅಜೀತ್ ಪೈ ಮತ್ತು ಕರುಣ ವಿ ಹಿರೆಗೌಡರ್ 1೦೦ ಅಂಕ ಪಡೆದಿರುತ್ತಾರೆ. ಗಣಿತ ಶಾಸ್ತ್ರದಲ್ಲಿ ರಕ್ಷಾ ಎಲ್ ಪೈ, ಸಮುದ್ಯತಾ ಮತ್ತು ಪದ್ಮಾವತಿ 1೦೦ ಅಂಕ ಪಡೆದಿರುತ್ತಾರೆ. ಜೀವಶಾಸ್ತ್ರದಲ್ಲಿ ಅಶ್ವತ್ ಅಜಿತ್ ಪೈ 1೦೦ ಅಂಕ ಪಡೆದಿರುತ್ತಾರೆ. ಗಣಕ ವಿಜ್ಞಾನದಲ್ಲಿ ಸ್ಟೀವ್ ಜೆಫ್ ಲೋಬೊ ಮತ್ತು ಪದ್ಮಾವತಿ 1೦೦ ಅಂಕ ಪಡೆದಿರುತ್ತಾರೆ. 

ವಾಣಿಜ್ಯ ವಿಭಾಗದಲ್ಲಿ 1೦೦ ಅಂಕಗಳನ್ನು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕ ಶಾಸ್ತ್ರದಲ್ಲಿ ರಿಚಾ ಗಣೇಶ್ ದಲ್ವಿ ಪಡೆದಿದ್ದು, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನದಲ್ಲಿ ನೈದಿಲೆ, ವ್ಯವಹಾರ ಅಧ್ಯಯನದಲ್ಲಿ ಶಿವಕುಮಾರ್, ಸಂಖ್ಯಾಶಾಸ್ತ್ರದಲ್ಲಿ ಅಭಯ್ ಸೂರ್ಯ ಮತ್ತು ಕೋಮಲ್ 1೦೦ ಅಂಕ ಪಡೆದಿದ್ದಾರೆ.

ಫಲಿತಾಂಶ ಸಂತಸ ತಂದಿದೆ
ಶಕ್ತಿ ಪ.ಪೂ ಕಾಲೇಜು ಕಳೆದ 6 ವರ್ಷಗಳ ಫಲಿತಾಂಶದಲ್ಲಿ ಸತತ ರಾಜ್ಯ ಮಟ್ಟದಲ್ಲಿ ಮೂರು ವರ್ಷಗಳಿಂದ ಬ್ಯಾಂಕ್‌ ನ್ನು ಗಳಿಸುತ್ತಿರುವುದು ಹಾಗೂ 10ನೇ ತರಗತಿಯಲ್ಲಿ ಕಡಿಮೆ ಫಲಿತಾಂಶವನ್ನು ಪಡೆದಿರುವ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿದರೂ ಅವರು ನಮ್ಮ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿರುವುದು ನನಗೆ ಸಂತೋಷವನ್ನು ತಂದುಕೊಟ್ಟಿದೆ. 

ಡಾ.ಕೆ.ಸಿ. ನಾಯ್ಕ್
ಅಡಳಿತಾಧಿಕಾರಿ, ಶಕ್ತಿ ಎಜ್ಯುಕೇಶನ್ ಟ್ರಸ್ಟ್

LEAVE A REPLY

Please enter your comment!
Please enter your name here