ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್‌ನಲ್ಲಿ ಮಳಿಗೆಯ ಏಳನೇ ವರ್ಷದ ಸಂಭ್ರಮಾಚರಣೆಯು ಎ.12ರಂದು ನಡೆಯಿತು.
ಏಳನೇ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಮಾತನಾಡಿ, ಚಿನ್ನಾಭರಣಗಳ ಉದ್ಯಮದಲ್ಲಿ ಜೋಸ್ ಅಲುಕ್ಕಾಸ್ ಜ್ಯುವೆಲ್ಲರ‍್ಸ್ ಬಹಳಷ್ಟು ಸಾಧನೆ ಮಾಡಿದೆ. ಮಳಿಗೆಯು ಅರುವತ್ತ ವರುಷ ಪೂರೈಸಿದ್ದು ಇದು ಆರು ನೂರು ವರ್ಷಗಳ ಸಂಭ್ರಮಾಚರಣೆ ನಡೆಸುವಂತಾಗಲಿ. ಮಳಿಗೆಯಲ್ಲಿ ಗ್ರಾಹಕರಿಗೆ ಚಿನ್ನಾಭರಣಗಳಲ್ಲಿ ಸಾಕಷ್ಟು ಆಯ್ಕೆಗಳಿವೆ, ಸಿಬ್ಬಂದಿಗಳಿಂದ ನಗುಮೊಗದ ಸೇವೆ ನೀಡಲಾಗುತ್ತಿದೆ. ಶಾಲೆಗಳು, ಸಂಘ-ಸಂಸ್ಥೆಗಳಿಗೆ ಸಿಎಸ್‌ಆರ್ ಫಂಡ್ ನೀಡುತ್ತಿರುವ ಜೋಸ್ ಅಲುಕ್ಕಾಸ್‌ನ ಸೇವೆಯು ದೇಶದಲ್ಲಿಯೇ ಮಾದರಿಯಾಗಿದೆ ಎಂದರು.
ಸಂತ ವಿಕ್ಟರಣ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಜಯಮಾಲ, ಗ್ರಾಹಕ ಸುಭಾಶ್ಚಂದ್ರ ಜೋಸ್ ಅಲುಕ್ಕಾಸ್‌ನ ಶೋ ರೂಂ ಮ್ಯಾನೇಜರ್ ರತೀಶ್, ಅಸಿಸ್ಟೆಂಟ್ ಮ್ಯಾನೇಜರ್ ಪ್ರಜೀಶ್ ಪ್ರಕಾಶ್, ಅಕೌಂಟ್ಸ್ ಮ್ಯಾನೇಜರ್ ಇನೋಶ್ ಸನ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ರಮ್ಯ ಸ್ವಾಗತಿಸಿ, ವಂದಿಸಿದರು. 7ನೇ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
7ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಎ.12ರಿಂದ ಎ.17ರ ತನಕ ಮಳಿಗೆಯಲ್ಲಿ ರೂ.75 ಸಾವಿರ ಮೌಲ್ಯದ ಚಿನ್ನಾಭರಣ ಖರೀದಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುವುದು. ವಜ್ರಗಳ ಖರೀದಿಗೆ ಪ್ರತಿ ಕ್ಯಾರೆಟ್‌ಗೆ ರೂ,15,೦೦೦ಗಳ ರಿಯಾಯಿತಿ ಮತ್ತು 500 ಮಿಲಿ ಗ್ರಾಂನ ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುವುದು. ಪ್ಲಾಟಿನಂ ಖರೀದಿಗೆ ಶೇ.7ರಷ್ಟು ರಿಯಾಯಿತಿ, ಪ್ರತಿ ಖರೀದಿಗೂ ಉಚಿತ ಉಡುಗೋರೆ, ಹಳೆಯ ಚಿನ್ನವನ್ನು ಹೊಸ BIS HUID ಹಾಲ್ ಮಾರ್ಕ್ ಚಿನ್ನದ ಆಭರಣಗಳಿಗೆ ಎಕ್ಸ್‌ಚೇಂಜ್ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಪ್ರಾರಂಭಗೊಂಡಿದ್ದು ಈಗಲೇ ಬುಕ್ ಮಾಡಿ ಆಭರಣ ಖರೀದಿಸುವಾಗ ಉಚಿತ ಚಿನ್ನದ ನಾಣ್ಯವನ್ನು ಪಡೆಯುವಂತೆ ಮಳಿಗೆಯ ಪ್ರಕಟಣೆ ತಿಳಿಸಿದೆ.