ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಎ.13ರಂದು ತಿಂಗಳಾಡಿ ಸಂಶುಲ್ ಉಲಮಾ ಎಜ್ಯುಕೇಶನ್ ಸೆಂಟರ್ ಗೆ ಭೇಟಿ ನೀಡಿ ನೂತನ ಮದ್ರಸ ಕಟ್ಟಡವನ್ನು ವೀಕ್ಷಿಸಿ ಶುಭ ಹಾರೈಸಿದರು.
ಸಂಶುಲ್ ಉಲಮಾ ಎಜ್ಯುಕೇಶನ್ ಸೆಂಟರ್ ನ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್, ಅಧ್ಯಕ್ಷ ಸಿದ್ದೀಕ್ ಸುಲ್ತಾನ್, ಉಪಾದ್ಯಕ್ಷ ಮಹಮ್ಮದ್ ಕುಂಞಿ ಪಟ್ಟೆ,
ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ದರ್ಬೆ, ಅಬ್ದುಲ್ ರಹಿಮಾನ್ ಅರಿಕ್ಕಿಲ, ಅಬ್ದುಲ್ ಸಯೀದ್ ತೋಟ, ಕೂಡುರಸ್ತೆ ಮಸೀದಿ ಅಧ್ಯಕ್ಷ ಮಜೀದ್ ಬಾಳಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ಎಸ್.ವಿ, ಕಾಂಗ್ರೆಸ್ ನಾಯಕರಾದ ರಾಮಚಂದ್ರ ಸೊರಕೆ, ಜಯಪ್ರಕಾಶ್ ಬದಿನಾರು, ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.
ಶಂಸುಲ್ ಉಲಮಾ ಎಜ್ಯುಕೇಶನ್ ಸೆಂಟರ್ ವತಿಯಿಂದ ಇದೇ ವೇಳೆ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.