ದ್ವಾರಕಾ ಪ್ರತಿಷ್ಠಾನ ಮತ್ತು ದಿ| ಕೃಷ್ಣ ಭಟ್ಟ ಪ್ರತಿಷ್ಠಾನ ವತಿಯಿಂದ “ಉಚಿತ ವಸಂತ ವೇದಪಾಠ” ಶಿಬಿರ ಉದ್ಘಾಟನಾ ಸಮಾರಂಭ

0

ಪುತ್ತೂರು: ದ್ವಾರಕಾ ಕಾರ್ಪೊರೇಷನ್ ಪ್ರೈ. ಲಿ. ಇದರ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಮತ್ತು ದಿ| ಕೃಷ್ಣ ಭಟ್ಟ ಪ್ರತಿಷ್ಠಾನ (ರಿ.) ಚೂಂತಾರು ಇವುಗಳ ನೇತೃತ್ವದಲ್ಲಿ ಉಪನೀತ ವಟುಗಳಿಗೆ ಉಚಿತ ವಸಂತ ವೇದಪಾಠ ಶಿಬಿರದ ಉದ್ಘಾಟನಾ ಸಮಾರಂಭವು ಎ.12ರಂದು ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವು ವೈದಿಕ ಪ್ರಾರ್ಥನೆಯೊಂದಿಗೆ ಆರಂಭವಾಗಿ ದ್ವಾರಕಾ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ. ಎನ್ ಅವರು ಗಣ್ಯರನ್ನು ಹಾಗೂ ನೆರೆದ ಸರ್ವರನ್ನೂ ಸ್ವಾಗತಿಸಿದರು.
ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಅರ್ತ್ಯಡ್ಕ ಅವರು ವೇದಪಾಠ ಶಾಲೆ ನಡೆದು ಬಂದ ರೀತಿಯನ್ನು ಉಲ್ಲೇಖಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೈದಿಕ ವಿದ್ವಾಂಸರಾದ ವೇ.ಮೂ. ಕೃಷ್ಣಕುಮಾರ ಉಪಾಧ್ಯಾಯ ಕುಂಬ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಭಟ್ ಅವರು ವೇದ ಮಂತ್ರಗಳ ಮಹತ್ವವನ್ನು ತಿಳಿಸಿ, ಮಕ್ಕಳು ಒಳ್ಳೆಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವಲ್ಲಿ ವೇದಪಾಠಶಾಲೆಗಳ ಪಾತ್ರ ಮಹತ್ವದ್ದು ಎಂದು ನುಡಿದರು.

ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕರಾದ ಮುರಳಿ ಕೃಷ್ಣ ಕೆ.ಎನ್ ಹಾಗೂ ಸುದಾನ ವಿದ್ಯಾಸಂಸ್ಥೆಯ ಅಧ್ಯಾಪಕಿಯಾದ ಕವಿತಾ ಅಡೂರು ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದ್ವಾರಕಾ ಪ್ರತಿಷ್ಠಾನ(ರಿ.)ದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ಅವರು ಅಧ್ಯಕ್ಷತೆ ವಹಿಸಿದರು. ಕೃಷ್ಣ ಭಟ್ಟ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ವೇದ ಪಾಠಶಾಲೆಯ ಮುಖ್ಯ ಪ್ರಾಚಾರ್ಯರಾದ ವೇ.ಮೂ. ಸಿ. ಶಿವಪ್ರಸಾದ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಗಣರಾಜ ಕುಂಬ್ಳೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದ ಅಧ್ಯಾಪಕರಾದ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕು. ಧನ್ಯಶ್ರೀ ಮಿಂಚಿನಡ್ಕ ಅವರು ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪಾಠಾರಂಭ ಹಾಗೂ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗದ ಪ್ರಾತ್ಯಕ್ಷಿಕೆ ನಡೆಯಿತು.

LEAVE A REPLY

Please enter your comment!
Please enter your name here