ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ವತಿಯಿಂದ ದರ್ಬೆ ಲಿಟಲ್ ಫ್ಲವರ್ ಶಾಲೆಯ ಸಹಯೋಗದೊಂದಿಗೆ, ಯುವ ಕ್ರೀಡಾಪಟುಗಳನ್ನು ತಯಾರಿಸುವ ನಿಟ್ಟಿನಲ್ಲಿ ಉಚಿತ ವಾಲಿಬಾಲ್ ತರಬೇತಿ ಬೇಸಿಗೆ ಶಿಬಿರವು ಎ.22ರಿಂದ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಳ್ಳಲಿದೆ.
ಪರಿಣಿತ ಅರ್ಹ ವಾಲಿಬಾಲ್ ತರಬೇತುದಾರರಿಂದ ಬೆಳಿಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ತರಬೇತಿ ಶಿಬಿರಗಳು ನಡೆಯಲಿದೆ. ಶಿಬಿರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಎ.21ರಂದು ನಡೆದು ಎ.22ರಿಂದ ತರಬೇತಿ ಶಿಬಿರ ನಡೆಯಲಿದೆ. ಪರಿಣಿತ ತರಬೇತುದಾರಿಂದ ತರಬೇತಿ ಪಡೆದು ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಮತ್ತು ಆರೋಗ್ಯಕರ ಹಾಗೂ ಡ್ರಗ್-ಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಸೀಮಿತ ಸೀಟ್‌ಗಳು ಮಾತ್ರ ಲಭ್ಯವಿದೆ.
ಹೆಚ್ಚಿನ ವಿವರಗಳಿಗಾಗಿ ಮುಖ್ಯ ತರಬೇತುದಾರ ಪಿ.ವಿ. ನಾರಾಯಣನ್ ಅಥವಾ 9900269455 ನಂಬರನ್ನು ಸಂಪರ್ಕಿಸುವಂತೆ ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.