ಪುತ್ತೂರು:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಎ.13 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ಥಾನಕ್ಕೆ ಹೋಗುವ ದಾರಿಯನ್ನು ಮುಕ್ವೆ ಮಜಲುಮಾರು ದೇವಸ್ಥಾನದ ವಠಾರದಿಂದ ನರಿಮೊಗರು ಮೃತ್ಯುಂಜಯೆಶ್ವರ ದೇವಸ್ಥಾನದ ಮುಖ್ಯದ್ವಾರದ ತನಕ ಸ್ವಚ್ಚಗೊಳಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವಿನಯ ಸುವರ್ಣರವರು ಉದ್ಘಾಟಿಸಿ, ಶುಭ ಹಾರೈಸಿದರು. ನಿವೃತ್ತ ಯೋಧರಾದ ಭಾಸ್ಕರ ಕೆ ರವರು ಶುಭ ಹಾರೈಸಿದರು. ಮಜಲುಮಾರು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಪದ್ಮನಾಭ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಅಣ್ಣಿ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಪಾದಕರಾದ ಉದಯ ಕುಮಾರ್ ಕೋಲಾಡಿ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಉಮೇಶ್ ಬಾಯಾರು, ಬಿಲ್ಲವ ಗ್ರಾಮ ಸಮಿತಿಯ ವಲಯ ಸಂಚಾಲಕ ಹರೀಶ ಪೂಜಾರಿ ನರಿಮೊಗರು, ವಿಶೇಷಚೇತನ ಮಕ್ಕಳ ಶಿಕ್ಷಕರಾದ ಶಶಿಕಲ ಪಿ . ನಿಕಟಪೂರ್ವ ಅಧ್ಯಕ್ಷರಾದ ಜಯರಾಮ ಬಿ.ಎನ್, ಉಪಾಧ್ಯಕ್ಷರಾದ ಸಮಿತ್ ಪಿ ರವರು ಉಪಸ್ಥಿತರಿದ್ದರು. ಘಟಕದ ನಿರ್ದೇಶಕರುಗಳಾದ ರವಿ ಕಲ್ಕಾರ್, ಮೋಹನ್ ಶಿಬರ, ಲೋಹಿತ್ ಕಲ್ಕಾರ್, ಶಿವಪ್ರಸಾದ್ ಕುಂಬ್ರ, ದೀಕ್ಷಿತ್ ಇರ್ದೆ, ಬಬಿತ್ ನರಿಮೊಗರು, ದಿಕ್ಷೀತಾ ಕುಮಾರಿ ಮತ್ತು ಸದಸ್ಯರುಗಳು ಸಹಕರಿಸಿದರು. ಕಾರ್ಯದರ್ಶಿ ಶರತ್ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು.