ಎ.15 ರಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ

0

ಆಲಂಕಾರು: ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಎ. 15 ರಂದು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.

ಬೆಳಿಗ್ಗೆ 9.00 ಗಂಟೆಗೆ ಕಡಬ ತಾಲೂಕು ಅಲಂತಾಯ ಶಾಲಾ ಭೇಟಿ , 10.00 ಗಂಟೆಗೆ ನೆಲ್ಯಾಡಿ ಗ್ರಾ.ಪಂ ಕಟ್ಟಡ ಉದ್ಘಾಟನೆ,11.30 ಕ್ಕೆಕಡಬ ತಾಲೂಕು ಕಚೇರಿಯಲ್ಲಿ ಜಂಟಿ ಸರ್ವೇ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಭಾಗಿ, 1.30ಕ್ಕೆ ಕಡಬ ತಾಲೂಕು ಎಡಮಂಗಲದಲ್ಲಿ ಕಾರ್ಯಕರ್ತರ ಸಭೆ ಮತ್ತು ಬಳಿಕ ಹಿರಿಯ ಕಾರ್ಯಕರ್ತರ ಮನೆ ಭೇಟಿ, 2.30 ಕ್ಕೆ ಸುಳ್ಯ ತಾಲೂಕು ನಿಂತಿಕಲ್ಲಿನಲ್ಲಿ ಸಿ.ಆರ್.ಎಫ್ ನಿಧಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ, 3.00 ಗಂಟೆಗೆ ಸುಳ್ಯ ತಾಲೂಕು ಪಂಜದಲ್ಲಿ ಕಾರ್ಯಕರ್ತರ ಭೇಟಿ, 4.30 ಕ್ಕೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

ಸಂಸದರ ಜೊತೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಪಾರ್ಟಿಯ ಹಿರಿಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸುಳ್ಯ ಮಂಡಲ ಬಿ.ಜೆ.ಪಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here