ಪುತ್ತೂರು: ಸರಕಾರಿ ಉ.ಹಿ.ಪ್ರಾ.ಶಾಲೆ ಸವಣೂರು ಶಾಲೆಯಲ್ಲಿ ಓದಿ ಪ್ರಸ್ತುತ ಸ.ಪ.ಪೂ.ಕಾಲೇಜ್ ಸವಣೂರು ಇಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸೌಜನ್ಯ ಬಿ, ಇವರು 516 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು, ಇವರನ್ನು ಅವರ ಮನೆಯಲ್ಲಿ ತಾನು ಕಲಿಸಿದ ವಿದ್ಯಾರ್ಥಿ ಎನ್ನುವ ಅಭಿಮಾನದಿಂದ ಸ.ಹಿ.ಪ್ರಾ.ಶಾಲೆ ಕಾಣಿಯೂರು ಮುಖ್ಯ ಗುರು ಬಾಲಕೃಷ್ಣ ಕೆ.ರವರು ವಿದ್ಯಾರ್ಥಿನಿಯ ಮನೆಯಲ್ಲಿ ಸನ್ಮಾನಿಸಿ, ಗೌರವಿಸಿ ಶುಭಹಾರೈಸಿದರು. ಸೌಜನ್ಯ ಬಸ್ತಿ ಸುಬ್ಬಣ್ಣ ಕನಡ ಮತ್ತು ಗಂಗಮ್ಮ ಇವರ ಪುತ್ರಿ. ಸವಣೂರು ಶಾಲಾ ಎಸ್ ಡಿಎಂಸಿ ಸದಸ್ಯ ಸತೀಶ್ ಬಲ್ಯಾಯ ಉಪಸ್ಥಿತರಿದ್ದರು.