ಪುತ್ತೂರು: ಇತ್ತೀಚಿಗೆ ಸ್ಕೂಟರ್ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಸುರತ್ಕಲ್ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಟ್ಯಾರು ಶ್ರೀ ರಾಜಗುಳಿಗ ಸಾನಿಧ್ಯ ಕಲ್ಲಕಟ್ಟ ಇದರ ಸಮಿತಿಯ ಪದಾಧಿಕಾರಿಯಾಗಿದ್ದ ಅಣ್ಣುರವರ ಚಿಕಿತ್ಸಾ ವೆಚ್ಚಕ್ಕಾಗಿ ಸಮಿತಿಯ ಸದಸ್ಯರು ಹಾಗೂ ಊರ ದಾನಿಗಳಿಂದ ವಾಟ್ಸಪ್ ಗ್ರೂಪ್ ಮೂಲಕ ಸಂಗ್ರಹಿಸಿದ ರೂ.32 ಸಾವಿರವನ್ನು ಅಣ್ಣುರವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಸಂಟ್ಯಾರು ನಿವಾಸಿಯಾಗಿರುವ ಅಣ್ಣುರವರು ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಣ್ಣುರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಶ್ರೀ ರಾಜಗುಳಿಗ ಸಾನಿಧ್ಯ ಕಲ್ಲಕಟ್ಟ ಇದರ ಸಮಿತಿಯ ಪದಾಧಿಕಾರಿಯಾಗಿದ್ದ ಇವರ ಚಿಕಿತ್ಸಾ ವೆಚ್ಚಕ್ಕಾಗಿ ಸಮಿತಿಯ ಸದಸ್ಯರು ಹಾಗೂ ಊರಿನ ದಾನಿಗಳಿಂದ ವಾಟ್ಸಾಪ್ ಗ್ರೂಪ್ ನ ಮೂಲಕ ಆರ್ಥಿಕ ನೆರವು ಯಾಚಿಸಿದ್ದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಸಮಿತಿ ಸದಸ್ಯರಾದ ಎಸ್ ಮಾಧವ ರೈ ಕುಂಬ್ರ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ್ ನಾಯಕ್ ವಾಗ್ಲೆ ಬಳಕ್ಕ ಮತ್ತು ಯತೀಶ್ ದೇವ ಸಂಟ್ಯಾರು, ಕಿರಣ್ ರೈ ಪುಂಡಿಕಾಯಿ, ಪ್ರಜ್ವಲ್ ರೈ ತೊಟ್ಲ, ಗಿರೀಶ್ ರೈ ಮೂಲೆ, ಮಹೇಶ್ ಕಿರಣ್ ರೈ ಮಲಾರ್, ಹರಿಕೃಷ್ಣ ಸಂಟ್ಯಾರು, ಉಪೇಂದ್ರ ಸಂಟ್ಯಾರು, ಜನಾರ್ಧನ ಸಂಟ್ಯಾರು, ಸತೀಶ್ ಸಂಟ್ಯಾರು, ಅಣ್ಣು ಸಂಟ್ಯಾರು ರವರ ಪತ್ನಿ ರತ್ನಾವತಿ ಉಪಸ್ಥಿತರಿದ್ದರು.