ಉಪ್ಪಿನಂಗಡಿ : ನೆಲ್ಯಾಡಿ ಗ್ರಾಮ ಪಂಚಾಯತ್ ಆಡಳಿತವು ತನ್ನ ಗ್ರಾಮ ವ್ಯಾಪ್ತಿಯ ಪಡುಬೆಟ್ಟು ಅಂಗನವಾಡಿ ಕೇಂದ್ರ ಹಾಗೂ ಕಲ್ಲಚೆಡವು ಎಂಬಲ್ಲಿ ಅಳವಡಿಸಿದ್ದ ಸೋಲಾರ್ ಆಧಾರಿತ ಬೀದಿ ದೀಪಗಳನ್ನು ಯಾರೋ ಖದೀಮರು ಕದ್ದೊಯ್ದಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲಿ ದೂರು ದಾಖಲಾಗಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ಜಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, 2023-24 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ ಅಳವಡಿಸಲಾಗಿದ್ದ ಸೋಲಾರ್ ಬೀದಿ ದೀಪಗಳನ್ನು ಕಳ್ಳರು ಕದ್ದೊಯ್ದಿದ್ದು , ಸುಮಾರು 25 ಸಾವಿರ ಮೌಲ್ಯದ ಸೊತ್ತುಗಳಾಗಿದೆ ಎಂದು ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.