ಪುತ್ತೂರು:ಚಲಿಸುತ್ತಿದ್ದ ಬೈಕ್ ಮೇಲೆ ಮರದ ಕೊಂಬೆ ಮುರಿದು ಬಿದ್ದು ಟಯರ್ ಪಂಕ್ಚರ್ ಅಂಗಡಿ ಮ್ಹಾಲಕ ಗಾಯಗೊಂಡಿರುವ ಘಟನೆ ಎ.17ರಂದು ಸಾಲ್ಮರದಲ್ಲಿ ನಡೆದಿದೆ.
ಸಾಲ್ಮರ ಮಹಮ್ಮದ್ ಶರೀಪ್‌ರವರ ಪುತ್ರ ತನ್ವೀರ್(52ವ.)ಗಾಯಗೊಂಡವರು. ಬನ್ನೂರಿನಲ್ಲಿ ಟಯರ್ ಪಂಕ್ಚರ್ ಅಂಗಡಿ ಹೊಂದಿರುವ ತನ್ವೀರ್ ಮಧ್ಯಾಹ್ನ ಸಾಲ್ಮರದ ತನ್ನ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಮನೆಯಿಂದ ಬನ್ನೂರಿನಲ್ಲಿರುವ ಅಂಗಡಿಗೆ ತೆರಳುತ್ತಿರುವ ವೇಳೆ ಸಾಲ್ಮರ ಮಸೀದಿ ಸಮೀಪ ಮಾವಿನ ಮರದ ಕೊಂಬೆ ಮುರಿದು ತನ್ವರ್‌ರವರ ಮೇಲೆ ಬಿದ್ದಿದೆ.

ಘಟನೆಯಿಂದ ತನ್ವೀರ್ ಅವರ ಕಾಲು ಹಾಗೂ ತಲೆಗೆ ಗಾಯಗಳಾಗಿದ್ದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.