ಪುತ್ತೂರು:ಇರ್ದೆ ಸೀರೆ ಹೊಳೆಯ ಬಳಿ ಭಾವೈಕ್ಯ ಕೇಂದ್ರವಾಗಿರುವ ಇರ್ದೆ-ಪಳ್ಳತ್ತಡ್ಕ ದರ್ಗಾ ಶರೀಫ್‌ನಲ್ಲಿ 49ನೇ ಉರೂಸ್ ಮುಬಾರಕ್ ಹಾಗೂ 7 ದಿನಗಳ ಧಾರ್ಮಿಕ ಮತ ಪ್ರಭಾಷಣವು ಎ.20ರಿಂದ ಪ್ರಾರಂಭಗೊಂಡು ಎ.26ರ ತನಕ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಆಲಿಕುಂಞಿ ಕೊರಿಂಗಿಲ ಹೇಳಿದರು.
ಎ.18ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉರೂಸ್ ಮುಬಾರಕ್‌ನಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಪ್ರಾರಂಭ ದಿನವಾದ ಎ.20ರಂದು ನಡೆಯುವ ಕಾರ್ಯಕ್ರಮದಲ್ಲಿ ಕೊರಿಂಗಿಲ ಜುಮಾ ಮಸೀದಿ ಖತೀಬರಾದ ಅಲ್‌ಹಾಜ್ ಜಿ.ಎಚ್ ಅಯ್ಯೂಬ್ ವಹಜಿ ಗಡಿಯಾರ ಉದ್ಘಾಟಿಸಲಿದ್ದಾರೆ. ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್‌ಹಾಜ್ ಸಯ್ಯಯ್ಯದ್ ಹಾಶಿಂ ಬಾಅಲವಿ ತಂಙಲ್ ಕೊರಿಂಗಿಲ ದುಃವಾ ನೆರವೇರಿಸಲಿದ್ದಾರೆ. ಫಾರೂಕ್ ನಈಮಿ ಕೊಲ್ಲಂ ಪ್ರಭಾಷಣ ನೀಡಲಿದ್ದಾರೆ.
ಉರೂಸ್ ಸಮಾರಂಭದಲ್ಲಿ ಎ.21ರಂದು ಅಬೂರಬೀಹ್ ಸ್ವದಕತುಲ್ಲ ಬಾಖವಿ ಕೊಲ್ಲಂ, ಎ.22ರಂದು ಬಹು|ಸಿ.ಕೆ ರಾಶಿದ್ ಬುಖಾರಿ ಕುಟ್ಯಾಡಿ, ಎ.23ರಂದು ಬಹು| ಅಲ್‌ಹಾಫಿಳ್ ಮಾಹಿನ್ ಮುನ್ನಾನಿ, ಎ.24ರಂದು ಬಹು|ಜಬ್ಬಾರ್ ಸಖಾಫಿ, ಪಾತೂರು ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಎ.25ರಂದು ಪುತ್ತೂರು ಕೇಂದ್ರ ಜುಮಾ ಮಸ್ಜಿದ್‌ನ ಮುದರ್ರಿಸ್ ಬಹು|ಅಲ್‌ಹಾಜ್ ಅಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುಃವಾ ನೆರವೇರಿಸಲಿದ್ದಾರೆ. ಬಹು|ಶುಹೈಬುಲ್ ಹೈತಮಿ, ವಯನಾಡ್ ಪ್ರಭಾಷಣ ನೀಡಲಿದ್ದಾರೆ.
ಎ.26ರಂದು ಉರೂಸ್ ಮುಬಾರಕ್‌ನ ಸಮಾರೋಪ ಸಮಾರಂಭ ನಡೆಯಲಿದ್ದು ಸಂಜೆ ಕೊರಿಂಗಿಲ ಜುಮಾ ಮಸೀದಿ ಖತೀಬ ಬಹು|ಅಲ್‌ಹಾಜ್ ಜಿ.ಎಚ್. ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಲಿದೆ. ನಂತರ ನಡೆಯುವ ಸೌಹಾರ್ದ ಸಂಗಮದಲ್ಲಿ ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಹು| ಅಲ್‌ಹಾಜ್ ಅಸಯ್ಯದ್ ಹಾಶಿಂ ಬಾಅಲವಿ ತಂಙಲ್ ಕೊರಿಂಗಿಲ ಉದ್ಘಾಟಿಸಲಿದ್ದಾರೆ. ಕುಂಬ್ರ ಕೆಐಸಿ ಪ್ರಾಧ್ಯಾಪಕ ಅನೀಸ್ ಕೌಸರಿ ದಿಕ್ಸೂಚಿ ಭಾಷಣ ನೀಡಿಲಿದ್ದಾರೆ.
ಈ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರಿನ ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಸಂಪ್ಯ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷಿಕ ರಕ್ಷಣ್ ರೈ ಬಾಳೆಹಿತ್ಲು, ಇರ್ದೆ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟು ಸಹಿತ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಂತರ ನಡೆಯುವ ಉರೂಸ್ ಸಮಾರಂಭವನ್ನು ಬಹು|ಅಲ್‌ಹಾಜ್ ಜೆ.ಹೆಚ್ ಅಯ್ಯೂಬ್ ವಹನಿ ಉದ್ಘಾಟಿಸಲಿದ್ದಾರೆ. ಬಹು|ಅಲ್‌ಹಾಜ್ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಲ್ ಕುಂಬೋಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಹು|ಶಫೀಕ್ ಬದ್ರಿ ಬಾಖವಿ ಕಡಕ್ಕಲ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಏಳು ದಿನಗಳ ಕಾಲ ನಡೆಯುವ ಉರೂಸ್ ಸಮಾರಂಭದಲ್ಲಿ ಬೆಳಿಗ್ಗೆ ಹಾಗೂ ರಾತ್ರಿ ಸೀರಣಿ ವಿತರಿಸಲಾಗುವುದು. ಕೊನೆಯ ದಿನ ಪ್ರತಿವರ್ಷದಂತೆ ರಾತ್ರಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಸೀರಣಿ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ, ಉರೂಸ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಕೊರಿಂಗಿಲ, ಕಾರ್ಯದರ್ಶಿ ಕೆ.ಎಂ ಹಮೀದ್ ಕೊಮ್ಮೆಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.