ಧ್ವಜಾವರೋಹಣದೊಂದಿಗೆ ಹತ್ತೂರ ಒಡೆಯನ ಜಾತ್ರೋತ್ಸವ ಸಂಪನ್ನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಎ.19 ರಂದು ಬೆಳಿಗ್ಗೆ ಗಂಟೆ 10.40ಕ್ಕೆ ಧ್ವಜಾವರೋಹಣದ ಮೂಲಕ ಸಂಪನ್ನಗೊಂಡಿತು.

ಎ.17ರಂದು ಬ್ರಹ್ಮರಥೋತ್ಸವ ನಡೆದ ಬಳಿಕ ಎ.18ರಂದು ಸಂಜೆ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ಶ್ರೀ ದೇವರು ದಾರಿಯುದ್ದಕ್ಕೂ ಹಲವು ಕಡೆಗಳಲ್ಲಿ ಕಟ್ಟೆ ಪೂಜೆ ಮತ್ತು ಅಂಗಡಿ, ಮನೆಗಳಿಂದ ಆರತಿ ಸ್ವೀಕರಿಸಿ ಎ.19ರಂದು ಬೆಳಿಗ್ಗೆ ವೀರಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತಲುಪಿ ಅಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ, ಬಳಿಕ ಕುಮಾರಧಾರ ಹೊಳೆಯ ತಟದಲ್ಲಿರುವ ಕಟ್ಟೆಯಲ್ಲಿ ಪುಷ್ಪಕನ್ನಡಿ ತೆರವು ಮಾಡಿ ಕುಮಾರಧಾರ ನದಿಯಲ್ಲಿ ಅವಭೃತ ಸ್ನಾನಕ್ಕೆ ಇಳಿದರು.

ವಿವಿಧ ಸುಗಂಧ ದ್ರವ್ಯಗಳಿಂದ ಶ್ರೀ ದೇವರಿಗೆ ತಂತ್ರಿಯವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕರು, ವೈದಿಕರಿಂದ ಮಂತ್ರ ಘೋಷದೊಂದಿಗೆ ಅಭಿಷೇಕಾದಿ ಸ್ನಾನ ಮುಗಿಸಿ ಅಲ್ಲಿಂದ ನೇರ ದೇವಳಕ್ಕೆ ಆಗಮಿಸಿ, ಧ್ವಜಾವರೋಹಣ ಮೂಲಕ ಜಾತ್ರೆ ಸಂಪನ್ನಗೊಂಡಿತು. ಈ ವೇಳೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here