ಪುಣಚ: ಇತ್ತೀಚೆಗೆ ನಿಧನರಾದ ಪುಣಚ ಗ್ರಾಮದ ಕೋಡಂದೂರು ನಿವಾಸಿ ಪ್ರೀತಿಪಾಲ್ ಅಡ್ಯಂತಾಯರವರ ಉತ್ತರಕ್ರಿಯಾದಿ, ವೈಕುಂಠ ಸಮರಾಧನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಎ.19ರಂದು ನಡೆಯಿತು.
ನಿವೃತ್ತ ಅಧ್ಯಾಪಕ ಚಂದ್ರಹಾಸ ಬೊಳಿಕ್ಕಳ ಮೃತರ ಸರಳ ಜೀವನ, ಸಾಮಾಜಿಕ, ಶೈಕ್ಷಣಿಕವಾಗಿ ಅವರ ಆದರ್ಶ ಬದುಕು, ವ್ಯಕ್ತಿತ್ವದ ಬಗ್ಗೆ ನುಡಿ ನಮನ ಸಲ್ಲಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಪುಣಚ ಪ್ರಾ.ವ್ಯ.ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ, ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಮಾದೋಡಿ, ಮೊದಲ್ಕಾಡಿ, ಬೈಲುಗುತ್ತು ಕುಟುಂಬಸ್ಥರು ಹಾಗೂ ಬಂಧುಗಳು ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಪುಷ್ಪಾರ್ಚನೆ ಮಾಡಿದರು.
ಪ್ರೀತಿಪಾಲ್ ಅಡ್ಯಂತಾಯರ ತಂದೆ ಸದಾಶಿವ ಅಡ್ಯಂತಾಯ, ತಾಯಿ ನಿಟಿಲಾಕ್ಷಿ ಅಡ್ಯಂತಾಯ, ಪತ್ನಿ ಪೂಜಾ ಎಸ್. ಪುತ್ರ ಸಾಯಿತುಷಾರ್, ಸಹೋದರಿ ಮಮತಾ ರೈ, ಭಾವ ಶಿವರಾಮ ರೈ, ಅಳಿಯ ಕಿರಣ್ ರೈ, ಅತಿಥಿಗಳನ್ನು ಸತ್ಕರಿಸಿದರು.
ಮೌನ ಪ್ರಾರ್ಥನೆ, ಪುಷ್ಪಾರ್ಚನೆ-:
ಅಗಲಿದ ಪುಣಚ ಕೋಡಂದೂರು ಪ್ರೀತಿಪಾಲ್ ಅಡ್ಯಂತಾಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.