ಎ.20: ಬೇಳ್ಪಾಡಿ ಉರೂಸ್ ಮುಬಾರಕ್ ಸಮಾರೋಪ

0

ಕಡಬ: ಕುಂತೂರು ಬೇಳ್ಪಾಡಿ ಎ & ಬಿ ಜುಮಾ ಮಸೀದಿ ಆಶ್ರಯದಲ್ಲಿ ಚರಿತ್ರೆ ಪ್ರಸಿದ್ಧವಾದ ಬೇಳ್ಪಾಡಿ ಮಖಾಂ ಶರೀಫ್‌ನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭದ ಸಮಾರೋಪ ಸಮಾರಂಭ ಎ.20ರಂದು ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಕುಂತೂರು ಎ & ಬಿ ಜುಮಾ ಮಸೀದಿ ಜಮಾಅತ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.


ಎ.15ರಂದು ರಾತ್ರಿ ಉರೂಸ್ ಸಂಭ್ರಮ ಆರಂಭಗೊಂಡಿದೆ. ಎ.20 ರಂದು ರಾತ್ರಿ 8ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕೇರಳ ಬಂದಿಯೋಡ್ ಬಹು| ಅಸ್ಸಯ್ಯಿದ್ ಹಾರಿಸ್ ತಂಙಳ್ ಅಲ್ ಹೈದ್ರೋಸ್ ಬಾಖವಿ ಅಲ್ ಹೈತಮಿ ದು:ವಾಶೀರ್ವಚನ ನೀಡಲಿದ್ದಾರೆ. ಕುಂತೂರು ಎ & ಬಿ ಜುಮಾ ಮಸೀದಿ ಮುದರ್ರಿಸ್ ಹಾಜಿ ಮೊಯಿದು ಫೈಝಿ ಉದ್ಘಾಟಿಸಲಿದ್ದಾರೆ. ಬಹು| ನವಾಝ್ ಮುನ್ನಾನಿ ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕುಂತೂರು ಎ & ಬಿ ಜುಮಾ ಮಸೀದಿ ಅಧ್ಯಕ್ಷರಾದ ಜ| ಹಸೈನಾರ್ ಹಾಜಿ ಚಾಲ್ಕರೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಫರೀದ್, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ., ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕಡಬ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹಿಂ ದಾರಿಮಿ ಕಡಬ, ಕಡಬ ರೇಂಜ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಖಾದರ್ ಹಾಜಿ ಸೀಗಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here