ದ.ಕನ್ನಡದ ಬೃಹತ್ ಮಳಿಗೆಯಾಗಿ ಹೆಸರಾಂತ ಚಿನ್ನಾಭರಣಗಳ ಶೋರೂಮ್ ಮುಳಿಯ ಅನಾವರಣ – ನಟ ರಮೇಶ್‌ ಅವರಿಂದ ಉದ್ಘಾಟನೆ

0

ಪುತ್ತೂರು: ಹಲವು ಹೊಸತನದೊಂದಿಗೆ ಪುತ್ತೂರಿನ ಹೆಸರಾಂತ ಚಿನ್ನಾಭರಣಗಳ ಶೋರೂಮ್ ಮುಳಿಯ ಆಭರಣ ಮಳಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಂಡಿತು.

ಕನ್ನಡದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಇಂದು (ಏ.20) ಬೆಳಿಗ್ಗೆ ಉದ್ಘಾಟನೆ ಮಾಡಿದರು.

ರಮೇಶ್ ಅರವಿಂದ್ ಅವರು ಬೆಳಿಗ್ಗೆ 9.30 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರುಶನ ಪಡೆದರು.

ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ , ಕೋರ್ಟು ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಶೋರೂಮಿಗೆ ಕರೆತರಲಾಯಿತು.

ಆ ಬಳಿಕ ದೇವರ ದೀಪದೊಂದಿಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಶೋರೂಮ್‌ಗೆ ಬಂದು ದೀಪ ಬೆಳಗಿಸಿ ಉದ್ಘಾಟಿಸಿದರು. ಚಿನ್ನ, ಬೆಳ್ಳಿಯ ನಾಣ್ಯಗಳನ್ನು ಅಕ್ಷಯ ಪಾತ್ರೆಗೆ ತುಂಬಿಸುವ ಮೂಲಕ ಉದ್ಘಾಟನೆಗೆ ಮೆರುಗು ತಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮುಖ್ಯಸ್ಥ ಕೇಶವ ಪ್ರಸಾದ್‌ ಮುಳಿಯ ಸಹಿತ ಅನೇಕ ಪ್ರಮುಖರು, ಸಿಬ್ಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here