ಪರ್ಪುಂಜ ರಾಮಜಾಲು ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ  ಪರಿವಾರ ದೈವಗಳ ಸಾನಿಧ್ಯದಲ್ಲಿ ತಂಬಿಲ ಸೇವೆ 

0

ಪುತ್ತೂರು: ಒಳಮೊಗ್ರು ಗ್ರಾಮದ ಕಾರಣಿಕ ಕ್ಷೇತ್ರವಾಗಿರುವ ರಾಮಜಾಲುವಿನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರಕ್ತೇಶ್ವರಿ ಶ್ರೀ ಪಂಜುರ್ಲಿ ಪರಿವಾರ ದೈವಗಳ ಸಾನಿಧ್ಯದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನ.7ರಂದು ಶ್ರೀ ದೈವಗಳ ಶಿಲಾ ಪ್ರತಿಷ್ಠೆ ನಡೆದು ಕಲಶಾಭಿಷೇಕ ನಡೆದು ನ.8ರಂದು ಸಂಜೆ ಶ್ರೀ ದೈವಗಳಿಗೆ ತಂಬಿಲ ಸೇವೆ ನಡೆಯಿತು.

ಕ್ಷೇತ್ರದ ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ , ಕುಪ್ಪೆ ಪಂಜುರ್ಲಿ,ಗುಳಿಗ ದೈವ, ಶ್ರೀ ಬೈರವ ದೈವಗಳು ಸೇರಿದಂತೆ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ಹರಿಹರ ಕೋಡಿಬೈಲು, ಕಾರ್ಯಾಧ್ಯಕ್ಷ ಅನಿಲ್ ಕೈ ಬಾರಿಕೆ, ಕೋಶಾಧಿಕಾರಿ ಪ್ರಮೀಳಾ ಎಸ್, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಮೋಹನದಾಸ ರೈ ಕುಂಬ್ರ, ಅಧ್ಯಕ್ಷಗಣೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಅತಿಥಿ, ಸಂಚಾಲಕ ರತನ್ ರೈ ಕುಂಬ್ರ, ಉಪಾಧ್ಯಕ್ಷ ಶೀನಪ್ಪ ನಾಯ್ಕ ಗುರಿಕುಮೇರು, ಕಾರ್ಯದರ್ಶಿ ಶ್ರೀಮತಿ ಸುರೇಶ್, ಜತೆ ಕಾರ್ಯದರ್ಶಿ ರೇಖಾ ಎಸ್. ಕೋಶಾಧಿಕಾರಿ ರಾಜೇಶ್ ರೈ ಪರ್ಪುಂಜ ಹಾಗೂ ಗೌರವ ಅಧ್ಯಕ್ಷರುಗಳಾದ ನಾರಾಯಣ ರೈ ಬಾರಿಕೆ, ಕೆ.ಸಂಜೀವ ಪೂಜಾರಿ ಕೂರೇಲು, ಪ್ರೇಮ್‌ ರಾಜ್ ರೈ ಪರ್ಪುಂಜ, ಚನಿಯಪ್ಪನಾಯ್ಕ ಗುರಿಕುಮೇರು ಹಾಗೂ ವಿವಿಧ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು, ಸಂಚಾಲಕರು ,ಸರ್ವ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here