ಡಾ. ಆಯೇಷಾ ನಿಸಾದ್ ಎಂ.ಪಿ ನೆಪ್ರೊಲಾಜ್ ಕಿಡ್ನಿ (ಸುಪರ್ ಸ್ಪೆಶಲಿಸ್ಟ್) ನಲ್ಲಿ ರಾಜೀವ ಗಾಂಧಿ ಯೂನಿವರ್ಸಿಟಿಗೆ ದ್ವಿತೀಯಾ ರ‍್ಯಾಂಕ್

0

ಪುತ್ತೂರು: ಡಾ. ಆಯೇಷಾ ನಿಸಾದ್ ಎಂ.ಪಿ ಕಿಮ್ಸ್ ಕಾಲೇಜ್ ಹುಬ್ಬಳ್ಳಿಯಲ್ಲಿ ಡಿ.ಎಂ ಡಾಕ್ಟರೇಟ್ ಆಫ್ ಮೆಡಿಸನ್ ನೆಪ್ರೊಲಾಜಿ ವ್ಯಾಸಂಗ ಮಾಡುತ್ತಿದ್ದು ಕರ್ನಾಟಕ ರಾಜ್ಯ ರಾಜೀವ ಗಾಂಧಿ ಯೂನಿವರ್ಸಿಟಿಗೆ ನೆಪ್ರೊಲಾಜಿ (ಕಿಡ್ನಿ)ಯಲ್ಲಿ ದ್ವಿತೀಯ ರ‍್ಯಾಂಕ್ ಗಳಿಸಿರುತ್ತಾರೆ.

ಇವರು ಸುದಾನ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ವ್ಯಾಸಂಗ, ಮಂಗಳೂರು ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಹಾಗೂ ಹಾಸನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ದರ್ಜೆಯಲ್ಲಿ ಹಾಗೂ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಎಂಡಿ ಮಾಸ್ಟರ್ ಆಫ್ ಮೆಡಿಸನ್‌ನಲ್ಲಿ ಟಾಪ್ 10ರಲ್ಲಿ ರ‍್ಯಾಂಕ್ ವಿಜೇತರಾಗಿ ಇದೀಗ ರಾಜೀವ ಗಾಂಧಿ ಯೂನಿವರ್ಸಿಟಿಯಲ್ಲಿ ನೆಪ್ರೊಲಾಜಿಯ ಕಿಡ್ನಿ ಸುಪರ್ ಸ್ಪೆಷಲಿಸ್ಟ್‌ನಲ್ಲಿ 2ನೇ ರ‍್ಯಾಂಕ್ ಪಡೆದಿರುತ್ತಾರೆ.

ಇವರು ಪುತ್ತೂರು ನೋಟರಿ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಹಾಗೂ ಬಿ. ಪಾತಿಮರವರ ಕಿರಿಯ ಪುತ್ರಿ.

LEAVE A REPLY

Please enter your comment!
Please enter your name here