ಪುತ್ತೂರು: 33 ಕೆ.ವಿ ಕ್ಯಾಂಪ್ಕೋ-ಸುಳ್ಯ, 33 ಕೆ.ವಿ ಕುಂಬ್ರ ಹಾಗೂ 33 ಕೆ.ವಿ ಕಾವು-ಸುಳ್ಯ ವಿದ್ಯುತ್ ಲೈನ್‌ಗಳಲ್ಲಿ ನಿರ್ವಹಣಾ ಕಾಮಗಾರಿಯು ಎ.22ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:30 ಗಂಟೆವರೆಗೆ 33/11 ಕೆ.ವಿ ಕ್ಯಾಂಪ್ಕೋ, 33/11 ಕೆ.ವಿ ಕುಂಬ್ರ, 33/11 ಕೆ.ವಿ ಕಾವು ಹಾಗೂ 33/11 ಕೆ.ವಿ ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಈ ಭಾಗದ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.