ಪುತ್ತೂರು: ಒಬ್ಬರನ್ನೊಬ್ಬರು ಒಪ್ಪಿಕೊಂಡು ಬಿಟ್ರೆ ಅದು ನಿಜವಾದ ಹ್ಯಾಪಿನೆಸ್. ಸಹಬಾಳ್ವೆ ಇರಬೇಕು. ಈ ನಿಟ್ಟಿನಲ್ಲಿ ಮುಳಿಯದ ಅಮೋಘವಾದ ಸ್ಲೋಗನ್ ಕ್ರಿಯೇಟಿಂಗ್ ಹ್ಯಾಪಿನೆಸ್‌ನ ಜೊತೆಗಿರೊಣ. ನಾವು ನಮ್ಮ ಜೀವನದಲ್ಲಿ ಮತ್ತು ಇನ್ನೊಬ್ಬರ ಜೀವನದಲ್ಲಿ ಹ್ಯಾಪಿನೆಸ್‌ನ್ನು ಕ್ರಿಯೇಟ್ ಮಾಡೋಣ ಎಂದು ಚಲನಚಿತ್ರ ನಟ, ಮುಳಿಯ ಗೋಲ್ಡ್ ಆಂಡ್ ಡೈಮಂಡ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ರಮೇಶ್ ಅರವಿಂದ್ ಹೇಳಿದರು.
70 ಚದರ ಅಡಿ ವೀಸ್ತೀರ್ಣದಲ್ಲಿ ಆರಂಭಗೊಂಡು ಇದೀಗ 10ಸಾವಿರ ಚದರ ಅಡಿಯಲ್ಲಿ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಬದಲಾವಣೆಗೊಂಡ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಮಳಿಗೆಯನ್ನು ಎ.20ರಂದು ಅನಾವರಣಗೊಳಿಸಿ ಬಳಿಕ ಸುಲೋಚನಾ ಟವರ್ ಅಪರಂಜಿ ರೂಫ್ ಗಾರ್ಡನ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಡಿದ ಸಂಪಾದನೆಯ ಒಂದು ಭಾಗವನ್ನು ಉಳಿಸಿಕೊಳ್ಳಬೇಕು. ಅದನ್ನು ಉಳಿಸಿಕೊಳ್ಳುವ ಉತ್ತಮ ವಿಧಾನವನ್ನು ಚಿನ್ನದ ಮೇಲೆ ಮಾಡಬೇಕು. ಇದಕ್ಕಿಂತ ಸೌಂದರ್ಯ ಇರುವ ಹೂಡಿಕೆ ಬೇರೆ ಯಾವುದು ಇಲ್ಲ. ನೀವು ಕಟ್ಟಿರುವ ಕನಸು 5ಸಾವಿರ ಕೋಟಿ. ಅದು ಬ್ಯುಸಿನೆಸ್ ಒಂದು ಕಡೆಯಾದರೆ ಇನೊಂದು ಕಡೆ ಸೌಂದರ್ಯ ಕ್ರಿಯೇಟಿಂಗ್ ಸಂತೋಷ ಉತ್ತಮ ವಿಚಾರ ಎಂದ ಅವರು ನಾನು ಎಲ್ಲರಿಗೂ ಖುಷಿಯಿಂದ ಇರಬೇಕೆಂದು ಹೇಳುತ್ತಾ ಬಂದಿದ್ದೆ. ಇಲ್ಲಿ ಮುಳಿಯ ಶೋ ರೂಮ್‌ನ ಶ್ಲೋಗನ್ ಕ್ರಿಯೇಟಿವ್ ಹ್ಯಾಪಿನಸ್ ಇದು ನನಗೆ ತುಂಬಾ ಖುಷಿ ತಂದಿದೆ. ಹಾಗಾಗಿ ಇವರ ಫಿಲಾಸಫಿ ನನಗೆ ಅವರ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಮಾಡಿದೆ. ಮುಳಿಯ ಸಂಸ್ಥೆ ಗ್ರಾಹಕರಿಗೆ ಕೊಟ್ಟ ಮಾತನ್ನು ಉಳಿಸಿದ ಕಾರಣ 80 ವರ್ಷದಿಂದ ಸಂಸ್ಥೆ ಉಳಿದು ಕೊಂಡಿದೆ. ಮುಂದೆ ಅದು ನೂರು, ನೂರೈವತ್ತು ವರ್ಷವು ಮುಂದುವರಿಯಲಿದೆ. 80 ವರ್ಷಗಳ ಇತಿಹಾಸ ಪಾರಂಪರಿಕ ಹೊಂದಿರುವ ಪ್ರಾಡಕ್ಟ್ ಮುಳಿಯ ಅದರ ಜೊತೆ ಸೇರುವುದು ಬಹಳ ಖುಷಿ ಆಗುತ್ತದೆ. ಅದರಲ್ಲೂ ಅವರಲ್ಲಿರುವ ಧಾರ್ಮಿಕ ವಿಷಯ, ಅವರ ಸಂಸ್ಕೃತಿ ನನಗೆ ಇಷ್ಟ ಆಗಿದೆ ಎಂದರು.
ಪ್ರತ್ಯಕ್ಷ ಲಕ್ಷ್ಮೀಗೆ ಸಣ್ಣ ಬ್ರಹ್ಮಕಲಶ-ಕೇಶವಪ್ರಸಾದ್ ಮುಳಿಯ:
ಮುಳಿಯ ಗೋಲ್ಡ್ ಆಂಡ್ ಡೈಮಂಡ್‌ನ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯ ಸ್ಥಾಪಕರು ನನ್ನ ಅಜ್ಜ ಮುಳಿಯ ಕೇಶವ ಭಟ್, ಅದಕ್ಕಿಂತಲೂ ಮೊದಲು 1933ರಲ್ಲಿ ಮುಳಿಯ ತಿಮ್ಮಪ್ಪಯ್ಯ ಮತ್ತು ಸಹೋದರರು ಮಂಗಳೂರಿನ ಬಂದರಿನಲ್ಲಿ ಜವುಳಿ ಮತ್ತು ರತ್ನ ವ್ಯಾಪಾರ ನಡೆಸುತ್ತಿದ್ದರು. ಆ ಸಮಯದಲ್ಲಿ ವಿದೇಶಿ ಬಹಿಷ್ಕಾರದ ಕೂಗಿಗೆ ಬಟ್ಟೆಗಳ ಎಲ್ಲಾ ಸ್ಟಾಕ್ ತ್ಯಜಿಸಿ ಕೇವಲ ಚಿನ್ನವನ್ನು ಮಾತ್ರ ಹಿಡಿದುಕೊಂಡು ಪುತ್ತೂರು ಕಟ್ಟೆ ಎಂಬ ಸ್ಥಳಕ್ಕೆ ಬಂದು ಮನೆ ಮನೆಗೆ ಚಿನ್ನ ಮುಟ್ಟಿಸುವ ಕೆಲಸ ಮಾಡಿದರು. 1944ರಲ್ಲಿ ನನ್ನ ದೊಡ್ಡಪ್ಪ ಕೃಷ್ಣ ಭಟ್ ಮತ್ತು ನನ್ನ ತಂದೆ ಸರಾಫ್ ಮುಳಿಯ ಶ್ಯಾಮ್ ಭಟ್ ಅವರು ನಿರ್ವಹಿಸುತ್ತಾ ಬಂದರು. 1994ರಲ್ಲಿ 70 ಚದರ ಅಡಿಯ ಮಳಿಗೆಯನ್ನು 400 ಚದರ ಅಡಿಗೆ ವಿಸ್ತರಿಸಿ ಪ್ರಥಮ ಎಸಿ ಶೋರೂಮ್ ಆಗಿ ಬದಲಾಯಿಸಿದೆವು. 2008ರಲ್ಲಿ ಮಡಿಕೇರಿಯಲ್ಲಿ ಶೋರೂಮ್ ಸ್ಥಾಪನೆ, 2005ರಲ್ಲಿ ಐಎಸ್‌ಓ ಸಂಸ್ಥೆಯಾಗಿ ಮಾಡಿದ ಹೆಮ್ಮೆಯಾಗಿದೆ. 2009ರಲ್ಲಿ ಗೋಣಿಕೊಪ್ಪ, 2011ರಲ್ಲಿ ಇದೇ ಶೋ ರೂಮ್ ವರ್ಷನ್ 2, 2011ರಲ್ಲಿ ಬೆಂಗಳೂರು, 2018ರಲ್ಲಿ ಬೆಳ್ತಂಗಡಿಯಲ್ಲಿ ಶೋರೂಮ್ ಆಗಿದೆ. ದೇವಸ್ಥಾನಗಳಲ್ಲಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶ. ಅದರಂತೆ ಇದು ಗ್ರಾಹಕ ದೇಗುಲ, ಲಕ್ಷ್ಮೀಯ ದೇಗುಲ, ಈ ಪ್ರತ್ಯಕ್ಷ ಲಕ್ಷ್ಮೀಗೆ ಸಣ್ಣ ಬ್ರಹ್ಮಕಲಶದ ಅವಶ್ಯತಕತೆ ಇದೆ. ಹಾಗಾಗಿ ಸಣ್ಣ ರೀತಿಯಲ್ಲಿ ರೂಪಾಂತರ ಮಾಡಿ ಮುಳಿಯ ಪುತ್ತೂರು ವರ್ಷನ್-2 ಮಾಡಿದ್ದೇವೆ ಎಂದರು.

ಮುಳಿಯಕ್ಕೆ ಬಂದ ಗ್ರಾಹಕರಿಗೆ ಸಂತೋಷ ಸೃಷ್ಟಿ -ಕೃಷ್ಣನಾರಾಯಣ ಮುಳಿಯ:
ಮುಳಿಯ ಗೋಲ್ಡ್ ಆಂಡ್ ಡೈಮಂಡ್‌ನ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, ಗ್ರಾಹಕರು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಇವತ್ತು ಮುಂದೆ ಸಾಗಿ ಬಂದಿದ್ದೇವೆ. ಈ ವಿಶ್ವಾಸಕ್ಕೆ ಹಿರಿಯರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ. ಕಾಲಕಾಲಕ್ಕೆ ಬದಲಾವಣೆ ಮಾಡಿಕೊಂಡು ಹೋಗಬೇಕಾಗಿರುವುದರಿಂದ ಈ ಶೋರೂಮ್ ಮತ್ತು ಬೆಳ್ತಂಗಡಿ ಶೋರೂಮ್‌ನ್ನು ನವೀಕರಣ ಮಾಡುವ ಕಲ್ಪನೆ ಬಂತು. ಆ ಕಲ್ಪನೆ ಮುಂದೆ ಹೋಗಿ ಬ್ರ್ಯಾಂಡ್ ಮಾದರಿಯಾಯಿತು. ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ, ಉತ್ತಮ ಸೇವೆಯಾಗಿ ಗ್ರಾಹಕರಿಗೆ ಊಟದ ವ್ಯವಸ್ಥೆ, ಮಕ್ಕಳಿಗೆ ಪ್ಲೇ ಎರಿಯಾ ಜೊತೆಗೆ ಮುಳಿಯಕ್ಕೆ ಬಂದ ಗ್ರಾಹಕರಿಗೆ ಸಂತೋಷವನ್ನು ಸೃಷ್ಟಿಸುವ ಕೆಲಸ ಆಗಲಿದೆ. ಸಮಾಜಮುಖಿ ಕೆಲಸವೂ ಮುಳಿಯದಿಂದ ಆಗಲಿದೆ ಎಂದು ಮುಳಿಯ ಶೋ ರೂಮ್‌ನ ವಿಶೇಷತೆ ಕುರಿತು ಮಾಹಿತಿ ನೀಡಿದರು.
ಗೌರವಾರ್ಪಣೆ:
ಮಳಿಗೆಯ ಕೆಲಸ ಕಾರ್ಯದಲ್ಲಿ ಸಹಕರಿಸಿದ ರೂಪೇಶ್ ನಾಯರ್, ಈಶ ನಾಯರ್, ಅಜಿತ್ ಕಾಮತ್, ರವೀಶ್ ಕೆಮ್ಮಾಯಿ, ರಾಮ್‌ಪ್ರಕಾಶ್, ಸತೀಶ್, ಅರುಣ್ ಕುಮಾರ್, ಮನೋಜ್, ಸುಽರ್, ವಿಷ್ಣುಸಿದ್ಧಿ, ರವಿಕೃಷ್ಣ, ಲಕ್ಷ್ಮೀಗಣೇಶ್, ಶೇಖರ್, ಜಯದೇವ್, ಗುಲಾಮ್, ನರಸಿಂಹ ಪೈ, ಪುನಿತ್ ನಾಯರ್, ರಾಜೇಶ್, ಜಯಪ್ರಕಾಶ್, ಸಂಜೀವ, ಆನಂದ್, ಅಬ್ದುಲ್ ಹಾರಿಸ್, ರಾಧಾಕೃಷ್ಣ, ಆಕರ್ಷ, ಸೋಮರವರನ್ನು ಸಂಸ್ಥೆಯ ವತಿಯಿಂದ ರಮೇಶ್ ಅರವಿಂದ್ ಅವರು ಸನ್ಮಾನಿಸಿದರು. ಸಂಸ್ಥೆಯ ಮಾಲಕರ ತಂದೆ ಮುಳಿಯ ಶ್ಯಾಮ್ ಭಟ್ ಮತ್ತು ತಾಯಿ ಸುಲೋಚನಾ ಶ್ಯಾಮ್ ಭಟ್, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಕೇಶವಪ್ರಸಾದ್ ಅವರ ಪತ್ನಿ ಕೃಷ್ಣವೇಣಿಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ ಅವರ ಪತ್ನಿ ಅಶ್ವಿನಿಕೃಷ್ಣ ಮುಳಿಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ನಂದಿನಿ ನಾಯಕ್ ಪ್ರಾರ್ಥಿಸಿದರು. ಪ್ರದೀಪ್ ಬಡೆಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಗುರುಪ್ರಿಯ ನಾಯಕ್‌ರವರು ರಮೇಶ್ ಅರವಿಂದ್ ನಟಿಸಿರುವ ಚಲನಚಿತ್ರದ ಗೀತೆಗಳ ಗಾಯನ ನಡೆಸಿದರು.
ಮಹಾಲಿಂಗೇಶ್ವರ ದೇವಳದಿಂದ ದೀಪ ಜ್ಯೋತಿ, ಮೆರವಣಿಗೆ
ಬೆಳಿಗ್ಗೆ ರಮೇಶ್ ಅರವಿಂದ್ ಅವರು ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭ ದೇವಳದ ನಂದಾದೀಪದಿಂದ ಪ್ರಜ್ವಲಿಸಿದ ಜ್ಯೋತಿಯನ್ನು ದೀಪದ ಮೂಲಕ ಮೆರವಣಿಗೆಯ ಮೂಲಕ ಮುಳಿಯ ಸಂಸ್ಥೆಗೆ ತರಲಾಯಿತು. ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ ವಾಹನ ಜಾಥಾ ಮೂಲಕ ಮುಳಿಯಕ್ಕೆ ಸ್ವಾಗತಿಸಲಾಯಿತು.
ಮುಳಿಯ ಫ್ಯಾಮಿಲಿಗೆ ಹೊಸ ಸದಸ್ಯನಾಗಿ ಸೇರ್ಪಡೆಯಾದೆ
ನಾನು ಮುಳಿಯ ಫ್ಯಾಮಿಲಿಗೆ ಹೊಸ ಸದಸ್ಯನಾಗಿ ಸೇರ್ಪಡೆಗೊಂಡಿದ್ದೇನೆ. ದೇವಸ್ಥಾನದಿಂದ ಓಪನ್ ಜೀಪಿನಲ್ಲಿ ಬಂದಿದ್ದೆ. ಶುದ್ದ ಪುತ್ತೂರಿನ ಅರಿವು ಆಗಿದೆ. ಅದು ಈಗ ಗೊತ್ತಾಗುತ್ತಿದೆ. ಕುತ್ತಿಗೆಯ ಹಿಂದಿನಿಂದ ಬೆವರಿನ ನದಿ ಸ್ಲೋ ಮೋಷನ್‌ನಲ್ಲಿ ಹರಿಯುತ್ತಿದೆ ಎಂದು ಹಾಸ್ಯ ಮಾಡಿದ ರಮೇಶ್ ಅರವಿಂದ್ ಅವರು ನಾವೆಲ್ಲ ಸ್ಟೇಜ್, ಕ್ಯಾಮರಕ್ಕಾಗಿ ಕಾಸ್ಟ್ಯೂಮ್ ಹಾಕಿಕೊಂಡು ಬರುತ್ತೇವೆ. ವೆದರ್‌ಗೋಸ್ಕರ ಅಲ್ಲ. ದೇವಸ್ಥಾನದಲ್ಲಿ ಹಚ್ಚಿದ ದೀಪವನ್ನು ಇಲ್ಲಿ ತೆಗೆದು ಕೊಂಡು ಬಂದು ಉದ್ಘಾಟನೆ ಮಾಡುವುದು ಉತ್ತಮ ವಿಚಾರ. ಇಂತಹ ವಿಚಾರ ನನಗೆ ತುಂಬಾ ಹತ್ತಿರವಾಗಿದೆ. ಹಾಗಾಗಿ ಇವತ್ತು ನಾನು ಮುಳಿಯ ಫ್ಯಾಮಿಲಿಗೆ ಹೊಸ ಸದಸ್ಯನಾಗಿ ಸೇರ್ಪಡೆಗೊಂಡಿದ್ದೇನೆ ಎಂದು ರಮೇಶ್ ಅರವಿಂದ್ ಹೇಳಿದರು. ಅವರು ತಮ್ಮ ಮಾತಿನ ಉದ್ದಕ್ಕೂ ಹಲವಾರು ಹಾಸ್ಯ ವಿಚಾರಗಳನ್ನು ಗ್ರಾಹಕರ ಮುಂದಿಟ್ಟರು.
ವ್ಯಾಪಾರದಲ್ಲಿ ಹತ್ತು ಪಟ್ಟು, 5ಸಾವಿರ ಕೋಟಿ ತಲುಪುವುದೇ ನಮ್ಮ ಗುರಿ
ಚಿನ್ನದ ಆಭರಣ ಮಾಡುವ ಜೊತೆಗೆ ಮಳಿಗೆಗಳನ್ನು ಹೆಚ್ಚಿಸುವಲ್ಲಿ ನಮ್ಮ ದೃಷ್ಟಿ ಹೋಗಬೇಕಾಗಿದೆ. ಸಂಸ್ಥೆಯಲ್ಲಿ ವ್ಯಾಪಾರ ಮುಂದಿನ ದಿನದಲ್ಲಿ ಹತ್ತು ಪಟ್ಟು ಮಾಡಿ 5ಸಾವಿರ ಕೋಟಿಯನ್ನು ತಲುಪುವುದೇ ನಮ್ಮ ಮುಂದಿನ ಗುರಿ. ಈ ಗುರಿಯನ್ನು ಮುಟ್ಟಲು ನಮಗೆ ಸಾರಥಿಯಾಗಿ ರಮೇಶ್ ಅರವಿಂದ್ ಅವರು ಸಹಕರಿಸಲಿದ್ದಾರೆ. ಬ್ರ್ಯಾಂಡ್ ಅನ್ನುವುದು ವ್ಯಕ್ತಿ. ಆ ವ್ಯಕ್ತಿಗೆ ವ್ಯಕ್ತಿತ್ವ ಇದೆ. ಮುಳಿಯಕ್ಕೊಂದು ವ್ಯಕ್ತಿತ್ವ ಇದೆ. ಮುಳಿಯ ಅಂದರೆ ಹೀಗೆಯೇ ಎಂಬ ಭಾವನೆ ಗ್ರಾಹಕರಲ್ಲಿದೆ. ಗ್ರಾಹಕರೊಂದಿಗೆ ನಾವಿದ್ದೇವೆ. ಗ್ರಾಹಕನಿಗೆ ಯಾವಾಗಲು ನಷ್ಟ ಆಗಬಾರದು ಎಂಬುದು ಮುಳಿಯ ಬ್ರ್ಯಾಂಡ್‌ನ ವ್ಯಕ್ತಿತ್ವ. ಶುದ್ದತೆಯನ್ನು ಮೀರಿದ ಪರಿಪೂರ್ಣತೆಯ ಎಡೆಗೆ ಸಾಗುತ್ತ ಸಂತೋಷವನ್ನು ಸೃಷ್ಟಿಸುವುದು ನಮ್ಮ ಕೆಲಸ. ಮುಂದಿನ ದಿವಸದಲ್ಲಿ 50 ಮಳಿಗೆಯಲ್ಲಿ 5 ಸಾವಿರ ಕೋಟಿಯೆಡೆಗೆ ನಮ್ಮ ನಡಿಗೆಗೆ ಎಲ್ಲರ ಸಹಕಾರ ಬೇಕು. ನಮ್ಮ ಸಂಸ್ಥೆಯಲ್ಲಿ ನಮ್ಮ ನಷ್ಟ ಮುಖ್ಯವಲ್ಲ, ಗ್ರಾಹಕನಿಗೆ ನಷ್ಟ ಆಗಾರದೆಂಬುದೇ ಮುಳಿಯ ಬ್ರ್ಯಾಂಡ್ ವ್ಯಕ್ತಿತ್ವ. ಎ.30ರ ತನಕ ಮುಳಿಯದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ಏ.28ರಂದು ಅಕ್ಷಯ ತೃತೀಯ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಕೇಶವಪ್ರಸಾದ್ ಮುಳಿಯ
ಮುಖ್ಯ ಆಡಳಿತ ನಿರ್ದೇಶಕರು ಮುಳಿಯ ಗೋಲ್ಡ್ ಆಂಡ್ ಡೈಮಂಡ್